ಫ್ಯಾಟ್ ಕರಗಿಸಲು ಹೋಗಿ ಜೀವ ಕಳೆದುಕೊಂಡ ಕನ್ನಡದ ನಟಿ; 22ರ ಪ್ರಾಯದ ಪುತ್ರಿ ನಿಧನಕ್ಕೆ ಕಣ್ಣೀರಿಡುತ್ತಿರುವ ತಂದೆ
Chetana Raj Death: ಕಿರುತೆರೆ ನಟಿ ಚೇತನಾ ರಾಜ್ ನಿಧನದಿಂದ ಅವರ ಕುಟುಂಬದವರಿಗೆ ತೀವ್ರ ಆಘಾತ ಆಗಿದೆ. ಮಗಳು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಚೇತನಾ ರಾಜ್ ತಂದೆ ಆರೋಪಿಸಿದ್ದಾರೆ.
ದೇಹದ ಫಿಟ್ನೆಸ್ ಕಾಪಾಡಿಕೊಳ್ಳಬೇಕು ಎಂಬ ಗುರಿ ನಟ-ನಟಿಯರಿಗೆ ಇರುವುದು ಸಹಜ. ಆದರೆ ಅದನ್ನು ಸಾಧಿಸಲು ಸೂಕ್ತವಲ್ಲದ ಮಾರ್ಗ ಅನುಸರಿಸಿದರೆ ಪ್ರಾಣಕ್ಕೆ ಅಪಾಯ ಆಗುವುದು ಗ್ಯಾರಂಟಿ. ಕನ್ನಡ ಕಿರುತೆರೆ ನಟಿ ಚೇತನಾ ರಾಜ್ (Chetana Raj) ಅವರಿಗೆ ಅಂಥ ದುಸ್ಥಿತಿ ಬಂದಿದೆ. ಸೊಂಟದ ಫ್ಯಾಟ್ ಕರಗಿಸಲು ಹೋಗಿ ಅವರು ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಶೆಟ್ಟಿ’ಸ್ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿಗೆ ಭ ಒಳಗಾದ 22ರ ಪ್ರಾಯದ ಚೇತನಾ ರಾಜ್ ಅವರು ನಿಧನರಾಗಿದ್ದಾರೆ. ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಇಡುತ್ತಿದ್ದಾರೆ. ತುಂಬ ಆರೋಗ್ಯವಾಗಿದ್ದ ಮಗಳು, ಈ ಸರ್ಜರಿಗೆ ಒಳಗಾದ ಬಳಿಕ ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಚೇತನಾ ರಾಜ್ ಸಾವಿನ (Chetana Raj Death) ದುಃಖದಲ್ಲಿ ಅವರ ತಂದೆ ವರದರಾಜ್ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 17, 2022 11:17 AM