ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ, ಕಿಚ್ಚ ಪ್ರತಿಕ್ರಿಯೆ ಏನು?
Kichcha Sudeep: ಬಿಗ್ಬಾಸ್ ಮನೆಯಲ್ಲಿ ಸುದೀಪ್ ವಾರದ ಪಂಚಾಯಿತಿ ನಡೆಸುತ್ತಿದ್ದಾರೆ. ಶನಿವಾರ ತುಸು ಗಂಭೀರ ಚರ್ಚೆ, ಸಂವಾದ ಮುಗಿಸಿ ಭಾನುವಾರ ತುಸು ಹಾಸ್ಯ, ತಮಾಷೆ ನಡೆಸಿದ್ದಾರೆ. ಚೈತ್ರಾ ಕುಂದಾಪುರ ಅವರು ಸುದೀಪ್ ಎದುರು ಅವರದ್ದೇ ಸಿನಿಮಾ ಆಗಿರುವ ‘ಕೆಂಪೇಗೌಡ’ ಡೈಲಾಗ್ ಹೊಡೆದಿದ್ದಾರೆ.
ಆರಂಭದಲ್ಲಿ ರಣರಂಗದಂತಾಗಿದ್ದ ಬಿಗ್ಬಾಸ್ ಮನೆ ಇತ್ತೀಚೆಗೆ ತುಸು ಸಹಜ ಸ್ಥಿತಿಗೆ ಮರಳಿದೆ. ಜಗಳ, ಮುನಿಸು ಈಗಲೂ ಮುಂದುವರೆದಿವೆಯಾದರೂ ಸಹ ಅಲ್ಲಲ್ಲಿ ಹಾಸ್ಯ, ಟಾಸ್ಕ್, ನಗು, ಹಾಡುಗಳು ಸಹ ಕೇಳಿ ಬರುತ್ತಿವೆ. ಇನ್ನು ಸುದೀಪ್ ವಾರದ ಪಂಚಾಯಿತಿ ನಡೆಸಕೊಡುವಾಗಲಂತೂ ಶನಿವಾರ ತುಸು ಗಂಭೀರ ಚರ್ಚೆ, ವಿಶ್ಲೇಷಣೆಗಳು ನಡೆದರೆ ಭಾನುವಾರ ಬಹುತೇಕ ಹಾಸ್ಯಕ್ಕೆ ಮೀಸಲು. ಅಂತೆಯೇ ಇಂದು (ಭಾನುವಾರ) ಸುದೀಪ್ ಮನೆಯ ಕೆಲ ಸದಸ್ಯರ ಟಾಲೆಂಟ್ ಅನ್ನು ಹೊರಗೆ ತೆಗೆಯುವ ಕಾರ್ಯ ಮಾಡಿದ್ದಾರೆ. ಹೊರಗೆ ಮೈಕಿನ ಮುಂದೆ ಅಬ್ಬರಿಸುತ್ತಿದ್ದ ಚೈತ್ರಾ ಕುಂದಾಪುರ ಅವರ ಕೈಯಲ್ಲಿ ಸಿನಿಮಾ ಡೈಲಾಗ್ ಹೇಳಿಸಿದ್ದಾರೆ. ಸುದೀಪ್ ಮುಂದೆ ನಿಂತು ಅವರದ್ದೇ ಸಿನಿಮಾ ‘ಕೆಂಪೇಗೌಡ’ ಡೈಲಾಗ್ ಹೊಡೆದಿದ್ದಾರೆ ಚೈತ್ರಾ, ಅಂದಹಾಗೆ ಚೈತ್ರಾರ ಡೈಲಾಗ್ಗೆ ಸುದೀಪ್ ಪ್ರತಿಕ್ರಿಯೆ ಹೇಗಿತ್ತು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 10, 2024 02:22 PM
Latest Videos