Loading video

ಚಿಕ್ಕಬಳ್ಳಾಪುರ: ಹಕ್ಕಿ ಜ್ವರ ಧೃಡಪಟ್ಟರೂ ಎಗ್ಗಿಲ್ಲದೆ ನಡೀತಿದೆ ನಾಟಿ‌ಕೋಳಿ ಮಾರಾಟ

| Updated By: Ganapathi Sharma

Updated on: Mar 03, 2025 | 10:09 AM

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಹಕ್ಕಿ ಜ್ವರ ದೃಡಪಟ್ಟಿತ್ತು. ಇದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು. ಹಕ್ಕಿ ಜ್ವರ ವರದಿಯಾದ ಬೆನ್ನಲ್ಲೇ ಅಧಿಕಾರಿಗಳು ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಇದೀಗ, ನಾಟಿ ಕೋಳಿಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ, ಮಾರ್ಚ್ 3: ಚಿಕ್ಕಬಳ್ಳಾಪುರ ಜಿಲ್ಲೆಯ ಯಲ್ಲಿ ಹಜ್ಕಿ ಜ್ವರ ಧೃಢಪಟ್ಟಿದ್ದರೂ ನಾಟಿ‌ಕೋಳಿಗಳ ಮಾರಾಟ ನಿಂತಿಲ್ಲ. ಜಿಲ್ಲೆಯ ಸಂತೆಗಳಲ್ಲಿ ನಾಟಿ‌ಕೋಳಿಗಳ‌ ಮಾರಾಟ ಎಗ್ಗಿಲ್ಲದೆ ಸಾಗಿದೆ. ಚಿಂತಾಮಣಿ ಸಂತೆಯಲ್ಲೂ ನಾಟಿ ಕೋಳಿಗಳ ಮಾರಾಟ ಬಲು ಜೋರಾಗಿದೆ. ಇದೀಗ, ಪಶು ವೈದ್ಯಾಧಿಕಾರಿಗಳು ನಾಟಿ ಕೋಳಿಗಳ ಸ್ಯಾಂಪಲ್ ಸಂಗ್ರಹ ‌ಮಾಡಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆಂಧ್ರದಿಂದ‌ ತಂದು ಜಿಲ್ಲೆಯ ಸಂತೆಗಳಲ್ಲಿ ನಾಟಿ ಕೋಳಿಗಳ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ