VIDEO: ದೊಡ್ಡ ನಮಸ್ಕಾರ… ಅಕ್ಷರ್ ಪಟೇಲ್ ಕಾಲಿಗೆ ಬಿದ್ದ ವಿರಾಟ್ ಕೊಹ್ಲಿ
Virat Kohli - Axar Patel Video: ದುಬೈನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್ಗಳಲ್ಲಿ 249 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 205 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 44 ರನ್ಗಳ ಜಯ ಸಾಧಿಸಿದೆ.
ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದ ವೇಳೆ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 249 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಉತ್ತಮ ಆರಂಭ ಪಡೆಯದಿದ್ದರೂ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು.
ಇದರ ನಡುವೆ ಟೀಮ್ ಇಂಡಿಯಾ ಬೌಲರ್ಗಳು ವಿಲಿಯಮ್ಸನ್ ವಿಕೆಟ್ ಪಡೆಯಲು ಹರಸಾಹಸಪಟ್ಟಿದ್ದರು. ಅಂತಿಮವಾಗಿ 41ನೇ ಓವರ್ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ (81) ಅವರನ್ನು ಸ್ಟಂಪ್ ಔಟ್ ಮಾಡಿದ್ದಾರೆ.
ಇತ್ತ ವಿಲಿಯಮ್ಸನ್ ವಿಕೆಟ್ ಸಿಗುತ್ತಿದ್ದಂತೆ ಅಕ್ಷರ್ ಪಟೇಲ್ ಬಳಿ ಧಾವಿಸಿ ಬಂದ ವಿರಾಟ್ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದಾರೆ. ಕೊಹ್ಲಿಯ ಈ ಕಾಲೆಳೆಯುವಿಕೆಗೆ ಅಕ್ಷರ್ ಬಿದ್ದು ಬಿದ್ದು ನಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಮೇಲ್ನೋಟಕ್ಕೆ ಕೊನೆಗೂ ಕೇನ್ ವಿಲಿಯಮ್ಸನ್ ಅನ್ನು ಔಟ್ ಮಾಡಿದ್ದೀಯಾ, ನಿನ್ನ ಪಾದಕ್ಕೆ ದೊಡ್ಡ ನಮಸ್ಕಾರ ಎಂಬಾರ್ಥದಲ್ಲಿ ವಿರಾಟ್ ಕೊಹ್ಲಿ ಅಕ್ಷರ್ ಪಟೇಲ್ ಅವರ ಕಾಲಿಗೆ ಬಿದ್ದು ಕಾಲೆಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾ ಆಟಗಾರರ ಚಿಲ್ಲತನಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆಗಳನ್ನು ವ್ಯಕ್ತವಪಡಿಸುತ್ತಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 249 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡ 205 ರನ್ಗಳಿಗೆ ಆಲೌಟ್ ಆಗಿ 44 ರನ್ಗಳಿಂದ ಸೋಲೊಪ್ಪಿಕೊಂಡಿದೆ.