ಮೂಲಭೂತ ಸೌಕರ್ಯ ಕೊರತೆ ಕಾರಣ ಹೇಳಿ ನಂದಿಗಿರಿಧಾಮಕ್ಕೆ ವಾರಾಂತ್ಯ ಪ್ರವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿಷೇಧಿಸಿದೆ

ಮೂಲಭೂತ ಸೌಕರ್ಯ ಕೊರತೆ ಕಾರಣ ಹೇಳಿ ನಂದಿಗಿರಿಧಾಮಕ್ಕೆ ವಾರಾಂತ್ಯ ಪ್ರವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿಷೇಧಿಸಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2022 | 7:21 PM

ನಂದಿಗಿರಿಧಾಮಕ್ಕೆ ವೀಕೆಂಡ್ ಸಂದರ್ಭಗಳಲ್ಲೇ ಹೆಚ್ಚು ಜನ ಬರುತ್ತಾರೆ ಮತ್ತು ಇದಕ್ಕೂ ಮೊದಲು ಸಹ ಇದೇ ಪರಿಸ್ಥಿತಿ ಇತ್ತು. ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಾರಣಕ್ಕೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರದ ದಿನಗಳಲ್ಲಿ ಪಿಕ್ನಿಕ್ ಬರುವುದು ಸಾಧ್ಯವೇ? ಜಿಲ್ಲಾಡಳಿತ ಈ ಆಯಾಮ ಕುರಿತು ಯೋಚಿಸಿಲ್ಲ ಅನಿಸುತ್ತದೆ.

ನಂದಿಬೆಟ್ಟ (Nandi Hill) ಮತ್ತೊಮ್ಮೆ ಬೇಡದ ಕಾರಣಗಳಿಗೆ ಸುದ್ದಿಯಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ (Chikkaballapur District Administration) ಶನಿವಾರ ಮತ್ತು ರವಿವಾರ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಆಜ್ಞೆ ಹೊರಡಸಿದೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಹಾಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ (Doddaballapur Rural Police) ಠಾಣೆಯ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ನಂದಿಬೆಟ್ಟದ ಪ್ರವೇಶ ಭಾಗದಲ್ಲಿ ಅಡ್ಡಲಾಗಿ ಇಟ್ಟು ಪ್ರವಾಸಿಗರನ್ನು ತಡೆಯುತ್ತಿದ್ದಾರೆ. ಅಂದಹಾಗೆ ಪ್ರವೇಶವನ್ನು ಯಾಕೆ ನಿಷೇಧಿಸಲಾಗಿದೆ ಅಂತ ಕೇಳಿದರೆ, ಜಿಲ್ಲಾಡಳಿತ ಮೂಲಭೂತ ಸೌಕರ್ಯಗಳ ಕೊರತೆ ಅಂತ ಹೇಳಿದೆ. ಇಷ್ಟು ದಿನ ಇರದ ಮೂಲಭೂತ ಸೌಕರ್ಯಗಳ ಸಮಸ್ಯೆ ಇದ್ದಕ್ಕಿಂದ್ದಂತೆ ಹೇಗೆ ಉದ್ಭವಿಸಿತು ಅಂತ ಜಿಲ್ಲಾಡಳಿತವೇ ಹೇಳಬೇಕು. ಪ್ರವಾಸಿಗರು ಯಾವ ಮೂಲಭೂತ ಸೌಲಭ್ಯ ಅಂತ ಕೇಳಿದರೆ, ರವಿವಾರ ಮತ್ತು ಶನಿವಾರ ವಾಹನದಟ್ಟಣೆ ಹೆಚ್ಚಾಗಿ ಬಹಳ ಸಮಸ್ಯೆಯಾಗಿದೆ ಎಂಬ ಉತ್ತರ ಸಿಕ್ಕಿದೆ.

ನಂದಿಗಿರಿಧಾಮಕ್ಕೆ ವೀಕೆಂಡ್ ಸಂದರ್ಭಗಳಲ್ಲೇ ಹೆಚ್ಚು ಜನ ಬರುತ್ತಾರೆ ಮತ್ತು ಇದಕ್ಕೂ ಮೊದಲು ಸಹ ಇದೇ ಪರಿಸ್ಥಿತಿ ಇತ್ತು. ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಾರಣಕ್ಕೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರದ ದಿನಗಳಲ್ಲಿ ಪಿಕ್ನಿಕ್ ಬರುವುದು ಸಾಧ್ಯವೇ? ಜಿಲ್ಲಾಡಳಿತ ಈ ಆಯಾಮ ಕುರಿತು ಯೋಚಿಸಿಲ್ಲ ಅನಿಸುತ್ತದೆ.

ಶನಿವಾರದಂದು ನಂದಿಬೆಟ್ಟದವರೆಗೆ ಬಂದು ನಿರಾಶರಾಗಿ ವಾಪಸ್ಸು ಹೋಗುತ್ತಿದ್ದ ಪ್ರವಾಸಿಗರ ಮತ್ತೊಂದು ದೂರು ಏನೆಂದರೆ, ಶನಿವಾರ ಮತ್ತು ರವಿವಾರ ಪ್ರವೇಶ ನಿಷಿದ್ಧ ಅಂತ ಅವರಿಗೆ ಅಲ್ಲಿಗೆ ಹೋದ ನಂತರವೇ ಗೊತ್ತಾಗಿದೆಯಂತೆ.

ಯಾವುದಾದರೂ ಮಾಧ್ಯಮದ ಮೂಲಕ ವಿಷಯ ಸಾರ್ವಜನಿಕರಿಗೆ ಗೊತ್ತಾಗುವಂತೆ ಮಾಡಿದ್ದರೆ ಅವರ ಕಾಸು ಮತ್ತು ಸಮಯ ಎರಡೂ ಉಳಿಯುತಿತ್ತು ಅಂತ ಅವರು ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟದ ಮೇಲಿನ ವಾತಾವರಣ, ಮಂಜು ಮತ್ತು ಕುಳಿರ್ಗಾಳಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದು ನಿಸ್ಸಂಶಯ!