ಆರೋಪಿ ಪರ ಬ್ಯಾಟಿಂಗ್: PSIನೊಂದಿಗಿನ ಆಡಿಯೋ ವೈರಲ್ ಬಗ್ಗೆ ಜಮೀರ್ ಸ್ಪಷ್ಟನೆ
ಸಚಿವ ಜಮೀರ್ ಅಹ್ಮದ್ ಖಾನ್ ಚಿಕ್ಕಬಳ್ಳಾಪುರದಲ್ಲಿ ತೆಲಂಗಾಣ ವ್ಯಾಪಾರಿಗಳ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಕ್ಬರ್ ಎಂಬಾತನಿಂದ ಹಣ ಪಡೆದ ಆರೋಪದ ಬಗ್ಗೆ ಮಾತನಾಡಿದ ಜಮೀರ್, ರಾಜಿ ಸಂಧಾನಕ್ಕೆ ಮಾತ್ರ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾನೂನುಬದ್ಧವಾಗಿ ಹಣ ವಸೂಲಿ ಮಾಡುವಂತೆ ತಿಳಿಸಿದ್ದು, ಈ ವಿಷಯವನ್ನು ಇತ್ಯರ್ಥಪಡಿಸಲು ಕಾಂಗ್ರೆಸ್ ಮುಖಂಡ ಆಂಜಿನಪ್ಪಗೆ ಜವಾಬ್ದಾರಿ ವಹಿಸಿರುವುದಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 29: ತೆಲಂಗಾಣದ ವ್ಯಾಪಾರಿಗಳ ಪರ ಪ್ರಭಾವ ಬೀರಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ (Minister Zameer) ಸ್ಪಷ್ಟನೆ ನೀಡಿದ್ದಾರೆ. ಆರೋಪ ಪರ ಬ್ಯಾಟ್ ಬೀಸಿದ ಸಚಿವ ಜಮೀರ್, ದುಡ್ಡು ತೆಗೆದುಕೊಂಡಿದ್ದು ನಿಜ, ಆದರೆ ಅವರು ಹೇಳುವಷ್ಟು ದುಡ್ಡಲ್ಲ. ಹಾಗೇನಾದರೂ ಇದ್ದರೆ ರಾಜಿ ಮಾಡಿಕೊಳ್ಳಿ ಎಂದು ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ. ಅವರವರ ವ್ಯವಹಾರದಲ್ಲಿ ನಾನೇನು ಮಾಡುವುದಕ್ಕೆ ಆಗುತ್ತೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗುವುದಕ್ಕೆ ಬಿಡಲ್ಲ. ಎರಡೂ ಕಡೆಯವರನ್ನ ಕೂರಿಸಿ ಸೆಟ್ಲ್ ಮಾಡುವುದಕ್ಕೆ ಹೇಳಿದ್ದೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
