ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ ಎನ್ನುತ್ತಾ 102ರ ಹಣ್ಣುಹಣ್ಣು ಮುದುಕಿ ಅಜ್ಜಿಯಿಂದ ಟೆಂಪಲ್ ರನ್

| Updated By: ಸಾಧು ಶ್ರೀನಾಥ್​

Updated on: Mar 25, 2024 | 1:04 PM

Temple run for Narendra Modi: ದೇವರ ಬಳಿ ನನಗಾಗಿ ಏನನ್ನು ಕೇಳಿಕೊಂಡಿಲ್ಲ, ದೇಶ, ಮೋದಿಗಾಗಿ ಬೇಡಿದ್ದೇನೆ ಎಂದು ಮೋದಿಗಾಗಿ ಮಗನ ಜೊತೆ ದೇವಾಲಯಗಳನ್ನ ಸುತ್ತುತ್ತಿರೋ ಶಿವಮ್ಮ ಹೇಳಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿದ್ದ ಶಿವಮ್ಮ ಇದೀಗ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿರುವ ರಂಭಾಪುರಿ ಮಠಕ್ಕೆ ಆಗಮಿಸಿದ್ದಾರೆ.

ಚಿಕ್ಕಮಗಳೂರು: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಶಿವಮ್ಮ ಎಂಬ 102 ವರ್ಷದ ಹಣ್ಣುಹಣ್ಣು ಮುದುಕಿ ಪ್ರಧಾನಿ ಮೋದಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಜೈ ಶ್ರೀರಾಮ್… ದೇಶಕ್ಕೆ ಒಳ್ಳೆದಾಗಬೇಕು, ಮಳೆ-ಬೆಳೆ ಚೆನ್ನಾಗಿ ಆಗಬೇಕು. ಮೋದಿ ಮತ್ತೆ ಪ್ರಧಾನ ಮಂತ್ರಿ ಆಗಬೇಕು. ಮೋದಿ ದೇಶಕ್ಕೆ ಒಳ್ಳೆದು ಮಾಡ್ತಾನೆ, ಅವನು ಬಂದ್ರೆ ಒಳ್ಳೆದಾಗುತ್ತೆ ಎನ್ನುತ್ತಾ ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ. ರಂಭಾಪುರಿ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದ ಶತಾಯುಷಿ ಶಿವಮ್ಮ ಮಳೆ-ಬೆಳೆ ಇಲ್ಲ, ದೇಶದ ಜನ ಸಮಸ್ಯೆಯಲ್ಲಿದ್ದಾರೆ. ಕಾಡು ಪ್ರಾಣಿಗಳು ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿವೆ. ದೇಶಕ್ಕೆ ಮೋದಿ ಪ್ರಧಾನಿಯಾದರೆ ಮಳೆ-ಬೆಳೆ ಆಗಿ ದೇಶ ಸುಭಿಕ್ಷವಾಗಿರುತ್ತೆ. ನನ್ನ ಸ್ವಾರ್ಥಕ್ಕಾಗಿ ಏನೂ ಇಲ್ಲ… ಸ್ವಾರ್ಥಕ್ಕೆ ಹೇಳ್ತಿಲ್ಲ ಎಂದು ಶತಾಯುಷಿ ಶಿವಮ್ಮ ಹೇಳಿದ್ದಾರೆ.

ದೇವರ ಬಳಿ ನನಗಾಗಿ ಏನನ್ನು ಕೇಳಿಕೊಂಡಿಲ್ಲ, ದೇಶ, ಮೋದಿಗಾಗಿ ಬೇಡಿದ್ದೇನೆ ಎಂದು ಮೋದಿಗಾಗಿ ಮಗನ ಜೊತೆ ದೇವಾಲಯಗಳನ್ನ ಸುತ್ತುತ್ತಿರೋ ಶಿವಮ್ಮ ಹೇಳಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿದ್ದ ಶಿವಮ್ಮ ಇದೀಗ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿರುವ ರಂಭಾಪುರಿ ಮಠಕ್ಕೆ ಆಗಮಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ