ಕಿಡಿಗೇಡಿ ವಿದ್ಯಾರ್ಥಿಗಳು ಶಾಲೆಯ ಪೀಠೋಪಕರಣ ಪೀಸ್ ಪೀಸ್ ಮಾಡಿಬಿಟ್ಟರು, ಯಾಕೆ? ವಿಡಿಯೋ ನೋಡಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರ ಶಾಲೆಯಲ್ಲಿ ಈ ದುಸ್ಸಾಹಸ ನಡೆದಿದೆ. ಮಲೆನಾಡಿನ ವಿದ್ಯಾರ್ಥಿಗಳ ಪುಂಡಾಟದ ಅಟ್ಟಹಾಸಕ್ಕೆ ಶಿಕ್ಷಕರು ಹಾಗು ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಹೆದ್ದಾರಿಪುರ ಸರಕಾರಿ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆದರೆ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಮುನ್ನ ಕೆಲವು ಕಿಡಿಗೇಡಿ ವಿದ್ಯಾರ್ಥಿಗಳ ದಾಂಧಲೆಯಿಂದ ತರಗತಿಯಲ್ಲಿನ ಕುರ್ಚಿ, ಟೇಬಲ್, ಟ್ಯೂಬ್ ಲೈಟ್, ಫ್ಯಾನ್, ಕಿಟಕಿ, ಮೇಲ್ಛಾವಣಿಯ ಹೆಂಚು, ಕೊಠಡಿ ಬಾಗಿಲು ಕ್ಷಣ ಮಾತ್ರದಲ್ಲಿ ಪೀಸ್ ಪೀಸ್ ಆಗಿದೆ.

ವಿದ್ಯಾರ್ಥಿಗಳು ದಾಂಧಲೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಪುಂಡ ವಿದ್ಯಾರ್ಥಿಗಳು ಹರಿ ಬಿಟ್ಟಿದ್ದಾರೆ. ಅದೀಗ ವೈರಲ್ ಆಗಿದ್ದು, ಶಾಲೆಯ ಮಾನ ಹರಾಜು ಆಗ್ತಿದೆ. ಪುಂಡ ವಿದ್ಯಾರ್ಥಿಗಳ ಅಟ್ಟಹಾಸದಿಂದ ಶಾಲೆಯ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಹಾಗೂ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಶಿಕ್ಷಕರು, ಎಸ್ ಡಿಎಂಸಿ ಸದಸ್ಯರು ಪೋಷಕರ ಜೊತೆ ಸಭೆ ನಡೆಸಿ ದಾಂಧಲೆ ನಡೆಸಿದ ಪುಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ