ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್: ಹಿಂದೂ ಮುಖಂಡರು ಪೊಲೀಸ್ ವಶಕ್ಕೆ

Edited By:

Updated on: May 05, 2025 | 10:17 AM

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ವಿಹೆಚ್​ಪಿ ಹಾಗೂ ಬಜರಂಗ ದಳ ಇಂದು ಚಿಕ್ಕಮಗಳೂರು ಬಂದ್​ಗೆ ಕರೆ ಕೊಟ್ಟಿದ್ದು ಪ್ರತಿಭಟನೆ ಹಮ್ಮಿಕೊಂಡಿವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದೂ ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದರು. ಅಂಗಡಿ ಮುಂಗಟ್ಟು ಬಂದ್ ಇದ್ದು, ಬಸ್ ಹಾಗೂ ಆಟೋ ಸಂಚಾರ ಎಂದಿನಂತೆ ಇವೆ.

ಚಿಕ್ಕಮಗಳೂರು, ಮೇ 5: ಉಗ್ರರ ದಾಳಿ ಹಾಗೂ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಇಂದು ಚಿಕ್ಕಮಗಳೂರು ಜಿಲ್ಲೆ ಬಂದ್ ಆಚರಿಸಲಾಗುತ್ತಿದೆ. ವಿಹೆಚ್​ಪಿ ಹಾಗೂ ಬಜರಂಗ ದಳ ಕರೆ ನೀಡಿರುವ ಬಂದ್ ಕಾರಣ ಚಿಕ್ಕಮಗಳೂರಿನ ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್ ಬಂದ್ ಆಗಿವೆ. ಶೃಂಗೇರಿ, ಕಳಸ, ಕೊಪ್ಪ, ಎನ್​.ಆರ್​.ಪುರ ಪಟ್ಟಣದಲ್ಲೂ ಬಂದ್ ಆಚರಿಸಲಾಗುತ್ತಿವೆ. ಆದರೆ, ಬಸ್​​ಗಳು ಹಾಗೂ ಆಟೋಗಳು ಎಂದಿನಂತೆ ಸಂಚಾರ ಮಾಡುತ್ತಿವೆ. 11 ಗಂಟೆ ಬಳಿಕ ಚಿಕ್ಕಮಗಳೂರು ಸೇರಿ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಿಂದೂ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ