ಶಕ್ತಿ ಯೋಜನೆ ಅಡ್ಡ ಪರಿಣಾಮ! ಕಾಫಿನಾಡಲ್ಲಿ ಸರ್ಕಾರಿ ಬಸ್ಸುಗಳು ಇಲ್ಲದೆ ಸುಗಮ ಪ್ರಯಾಣಕ್ಕಾಗಿ ಭಕ್ತರು, ಪ್ರವಾಸಿಗರು ಪರದಾಟ

| Updated By: ಸಾಧು ಶ್ರೀನಾಥ್​

Updated on: Aug 12, 2023 | 10:38 AM

Shakti Scheme: 80ಕ್ಕೂ ಹೆಚ್ಚು ಮಹಿಳೆಯರು ಬಸ್ ಇಲ್ಲದೆ ರಾತ್ರಿ ಪಿಕಪ್ ವಾಹನದಲ್ಲೇ ಮೂಡಿಗೆರೆಗೆ ಪ್ರಯಾಣ ಬೆಳೆಸಿದರು. ಈ ಅವಾಂತರಕ್ಕೆ ಮುಖ್ಯ ಕಾರಣ ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಬಸ್ಸುಗಳ ಸಂಖ್ಯೆ ಇಳಿಮುಖವಾಗಿರುವುದು.

ಚಿಕ್ಕಮಗಳೂರು, ಆಗಸ್ಟ್​ 12: ದಿಢೀರನೆ ಸರ್ಕಾರಿ ಬಸ್​​ಗಳು ಇಲ್ಲದೆ ಕಾಫಿನಾಡಿನಲ್ಲಿ ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಅವೇಳೆಯಲ್ಲಿ ಪರದಾಟ ನಡೆಸಿದರು. ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಹೊರನಾಡು ಕ್ಷೇತ್ರದಲ್ಲಿ ಬಸ್ಸಿಗಾಗಿ ಭಕ್ತರು ಮತ್ತು ಪ್ರವಾಸಿಗರು (Devotees, Tourists) ತಮ್ಮ ಸುಗಮ ಪ್ರಯಾಣಕ್ಕಾಗಿ ಬಹಳ ತ್ರಾಸಪಟ್ಟರು. ನಿನ್ನೆ ಶುಕ್ರವಾರ ಸಂಜೆಯಿಂದ ರಾತ್ರಿವರೆಗೂ ಬಸ್ಸಿಗಾಗಿ ಪ್ರವಾಸಿಗರು ಕಾದು ಸುಸ್ತಾದರು. ಬಸ್ ಇಲ್ಲದೆ ರಾತ್ರಿ ಪಿಕಪ್ ವಾಹನದಲ್ಲೇ ಮೂಡಿಗೆರೆಗೆ ಪ್ರಯಾಣ ಬೆಳೆಸಿದರು. 80ಕ್ಕೂ ಹೆಚ್ಚು ಮಹಿಳೆಯರು ಪಿಕಪ್ ವಾಹನವನ್ನೇರಿ ಸಂಚಾರ ಮಾಡಿದರು. ಈ ಅವಾಂತರಕ್ಕೆ ಮುಖ್ಯ ಕಾರಣ ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ (Shakti Scheme) ಬಸ್ಸುಗಳ ಸಂಖ್ಯೆ ಇಳಿಮುಖವಾಗಿರುವುದು. ದಾವಣಗೆರೆ, ಚಿತ್ರದುರ್ಗ, ಹಾಸನ, ತುಮಕೂರು, ಕಡೂರು ಪ್ರಯಾಣಿಕರಿಗೆ ಈ ಸಂಕಷ್ಟ ಒದಗಿ ಬಂದಿದೆ. ದುಬಾರಿ ಹಣ ನೀಡಿ ಪಿಕ್ ಅಪ್ ವಾಹನದಲ್ಲಿ ಸಂಚಾರ ಮಾಡುವಷ್ಟರಲ್ಲಿ ಪ್ರಯಾಣಿಕರು ಹೈರಾಣಗೊಂಡಿದ್ದಾರೆ. ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಬಸ್ ಸಿಗದಿದ್ದಕ್ಕೆ ತಮ್ಮ ಆಕ್ರೋಶ ಹೊರಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on