ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿ ಗಂಧದ ಮರ ಕಡಿದು ರೈತ ಆಕ್ರೋಶ

Updated on: Feb 10, 2026 | 6:12 PM

ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.

ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ ಪಕ್ಕ ಇದೆ ಎಂದು ಮರವನ್ನು ಕಡಿದುಹಾಕಿದ್ದಾರೆ. ಕೋರ್ಟ್ ನಲ್ಲಿ ಪರಿಹಾರವನ್ನು ನೀಡಬೇಕೆಂದು ಆದೇಶವಾದರೂ ಸಹ ಅರಣ್ಯ ಇಲಾಖೆ ಕೊಟ್ಟಿಲ್ಲ. ಮೂವತ್ತು ಮರ ಕಡಿದಿದ್ದಾರೆ. ಅದಕ್ಕಾಗಿ ನಾನು ಮುನ್ನೂರು ಮರ ಕಡಿಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2026 06:12 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More