ನಿರಂತರ ಮಳೆಗೆ ರಾತ್ರೋರಾತ್ರಿ‌ ಕುಸಿದ ಪುರಾತನ ಬಾವಿ: ಗ್ರಾಮಸ್ಥರು ಶಾಕ್!

Edited By:

Updated on: Oct 23, 2025 | 8:29 AM

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗಣಪತಿಹಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಗಣಪತಿ ದೇವಸ್ಥಾನದ ಮುಂದಿದ್ದ ಪುರಾತನ ಬಾವಿ ಸಂಪೂರ್ಣ ಕುಸಿದಿದೆ. ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬಾವಿಯ ಕಲ್ಲುಗಳು ರಾತ್ರೋ ರಾತ್ರಿ ಕುಸಿದಿವೆ. ಬಾವಿಯ ಕುರುಹೂ ಇಲ್ಲದಂತೆ ಮಾಯವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಚಿಕ್ಕಮಗಳೂರು, ಅಕ್ಟೋಬರ್​ 23: ಜಿಲ್ಲೆಯ ಹಲವೆಡೆ ಮಳೆ (rain) ಆರ್ಭಟ ಮುಂದುವರೆದಿದೆ. ಪರಿಣಾಮ ಕಡೂರು ತಾಲೂಕಿನ ಗಣಪತಿಹಳ್ಳಿ ಗ್ರಾಮದ ಗಣಪತಿ ದೇಗುಲ ಮುಂದೆ ಇದ್ದ ಬಾವಿ ಕುಸಿಬಿದಿರುವಂತಹ ಘಟನೆ ನಡೆದಿದೆ. ತೇವಾಂಶ ಹೆಚ್ಚಾದ ಹಿನ್ನೆಲೆ ಬಾವಿಯೊಳಗೆ ಕಟ್ಟಿದ್ದ ಕಲ್ಲುಗಳು ಕುಸಿದಿವೆ. ಕಳೆದ 4-5 ದಿನಗಳಿಂದ ಚಿಕ್ಕಮಗಳೂರು ನಗರ, ಕಡೂರು ಸೇರಿ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 23, 2025 08:27 AM
Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More