ಚಾರ್ಮಾಡಿ ಘಾಟ್​ನಲ್ಲಿ ಸಲಗನ ಆರ್ಭಟ, ನೀವು ಮಾತ್ರ ಅವನ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸರ್​​​​​ ಎಂದ ನೆಟ್ಟಿಗರು

| Updated By: ವಿವೇಕ ಬಿರಾದಾರ

Updated on: May 14, 2024 | 9:15 AM

ಚಾರ್ಮಡಿ ಘಾಟ್​​ನ ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು. ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್​ ಅಲ್ಲಿ ಪಾರ್ಕ್​​ ಮಾಡಿ, ಮೊಬೈಲ್​ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ.

ಚಿಕ್ಕಮಗಳೂರು, ಮೇ 14: ಮಳೆಯಾಗುತ್ತಿದ್ದರಿಂದ ಪಕೃತಿ ಸೌಂದರ್ಯವನ್ನು ಕಂಡು ಕಣ್ತುಂಬಿಕೊಳ್ಳಲು ಮಲೆನಾಡಿನ ಜಿಲ್ಲೆಗಳಿಗೆ ಪ್ರವಾಸಕ್ಕೆಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ವಿಶೇಷವಾಗಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ (Charmady) ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಚಾರ್ಮಡಿ ಘಾಟ್​ನ ರಸ್ತೆಯಲ್ಲಿ ಪ್ರಯಾಣಿಸುವುದು ಬಹಳ ರೋಮಾಂಚನಕಾರಿಯಾಗಿರುತ್ತದೆ. ಹಸಿರು ಕಾನನ ಮಧ್ಯೆ ಘಾಟ್​ನಲ್ಲಿ ಪ್ರಯಾಣಿಸುವುದು ಅವರ್ಣಿಯ. ಇಂದು (ಮೇ 14) ಬೆಳಿಗ್ಗೆ ಚಾರ್ಮಡಿ ಘಾಟ್​ನಲ್ಲಿ ತೆರಳುತ್ತಿದ್ದ ಜನರಿಗೆ ಗಜರಾಜನ ದರ್ಶನವಾಗಿದೆ.

ಚಾರ್ಮಡಿ ಘಾಟ್​​ನ ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು. ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್​ ಅಲ್ಲಿ ಪಾರ್ಕ್​​ ಮಾಡಿ, ಮೊಬೈಲ್​ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ. ಈ ಒಂಟಿ ಸಲಗಕ್ಕೆ ಒಂಟಿ ಸಲಗಕ್ಕೆ ಮದವೇರಿರುವ ಶಂಕೆ ವ್ಯಕ್ತವಾಗಿದೆ.

ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ನಿಂತಿದ್ದರಿಂದ ಚಾರ್ಮಾಡಿ ಘಾಟ್​ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಈ ಒಂಟಿ ಸಲಗ ಹಗಲು-ರಾತ್ರಿ ಎನ್ನದೆ ಉಪಟಳ ನೀಡುತ್ತಿದೆ. ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: May 14, 2024 08:39 AM