Daily Devotional: ಆಮೆ ಉಂಗುರ ಧರಿಸುವುದರ ಮಹತ್ವ ತಿಳಿಯಿರಿ

Daily Devotional: ಆಮೆ ಉಂಗುರ ಧರಿಸುವುದರ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: May 14, 2024 | 6:58 AM

ಆಮೆಯ ಪ್ರತಿಮೆ ಮಾತ್ರವಲ್ಲದೆ ಆಮೆ ಉಂಗುರವನ್ನು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಬೆರಳಿಗೆ ಆಮೆಯ ಉಂಗುರವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಈ ಉಂಗುರವನ್ನು ಧರಿಸುವುದರಿಂದ ಆಗುವ ಲಾಭವೇನು? ಈ ವಿಡಿಯೋ ನೋಡಿ

ಆಮೆಯ ಪ್ರತಿಮೆ ಮಾತ್ರವಲ್ಲದೆ ಆಮೆ ಉಂಗುರವನ್ನು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಬೆರಳಿಗೆ ಆಮೆಯ ಉಂಗುರವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಈ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ನಂಬಲಾಗಿದೆ. ಆಮೆಯ ಉಂಗುರವನ್ನು ಧರಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದವೂ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಹರಳಿನ ಆಮೆಯ ಪ್ರತಿಮೆಯನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಾತ್ರವಲ್ಲದೆ ಫೆಂಗ್ ಶುಯಿ ಪ್ರಕಾರವೂ ಆಮೆ ಮನೆಯಲ್ಲಿದ್ದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಸುಖಮಯ ಜೀವನ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ಇದರಿಂದ ಮನೆಯಲ್ಲಿ ಒಳ್ಳೆಯದಾಗಿ, ಸಂಪತ್ತು ಸಿಗಲಿ ಎಂಬುದಾಗಿದೆ.