AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇರಪ್ರಸಾರ: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ನೇರಪ್ರಸಾರ: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ನಯನಾ ರಾಜೀವ್
|

Updated on:May 14, 2024 | 12:13 PM

ಪ್ರಧಾನಿ ನರೇಂದ್ರ ಮೋದಿ ಇಂದು ವಾರಾಣಸಿಯಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು ವಿಡಿಯೋ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ(Narendra Modi) ಲೋಕಸಭಾ ಚುನಾವಣೆಗೆ ವಾರಾಣಸಿಯಿಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ. ಅದಕ್ಕೂ ಮುನ್ನ ದಶಾಶ್ವಮೇಧ ಘಾಟ್​ನಲ್ಲಿ ಗಂಗಾ ಮಾತೆಗೆ ಪೂಜೆ ನೆರವೇರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಹಲವು ಕೇಂದ್ರ ಸಚಿವರು ಆಗಮಿಸಿದ್ದಾರೆ. ಕಾಲಭೈರವಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ವಾರಾಣಸಿಯಲ್ಲಿ ಮೋದಿ ರೋಡ್ ಶೋ ನಡೆಸಿದ್ದರು.

ಬಿಹಾರ ಸಿಎಂ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ಪುದುಚೇರಿ ಸಿಎಂ ಎನ್. ರಂಗಸ್ವಾಮಿ, ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೊ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠವಾಲೆ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡು, ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ಎಲ್‌ಜೆಪಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್, ಎಲ್‌ಜೆಪಿ ರಾಜ್ಯಾಧ್ಯಕ್ಷ ಅಂಗದ್ ಪಾಸ್ವಾನ್ ಇದ್ದರು.

ಮೋದಿ ನಾಮಪತ್ರ ಸಲ್ಲಿಕೆ ವಿಡಿಯೋ

ಅಷ್ಟೇ ಅಲ್ಲದೆ  ಜೆಡಿಯು ಮುಖಂಡ ಉಪೇಂದ್ರ ಕುಶ್ವಾಹ, ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ, ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್, ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ, ಅಪ್ನಾ ದಳದ ರಾಜ್ಯಾಧ್ಯಕ್ಷ ರಾಜ್‌ಕುಮಾರ್ ಪಾಲ್, ಸಂಸದ ಅನ್ಬುಮಣಿ ರಾಮದಾಸ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಜಿ.ಕೆ.ವಾಸನ್, ಬಿಜೆಪಿ ಮುಖಂಡ ದೇವನಾಥನ್ ಯಾದವ್, ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಕೇರಳದ ಸಂಚಾಲಕ ತುಷಾರ್ ವೆಲ್ಲಪ್ಪಲ್ಲಿ, ಅಸ್ಸಾಂ ಕೃಷಿ ಸಚಿವ ಅತುಲ್ ಬೋರಾ, ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮೊಹಾಂತ, ವೀರೇಂದ್ರ ಪ್ರಸಾದ್ ವೈಶ್, ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸಿಇಒ ಪ್ರಮೋದ್ ಬೊರೊ, ಅನಿರುದ್ಧ ಕಾರ್ತಿಕೇಯನ್, ರುವಾಂಗ್ವಾರಾ ಮುಂತಾದವರು ಪ್ರಧಾನಿ ನಾಮಪತ್ರ ಸಲ್ಲಿಕೆ ವೇಳೆ ಇವರೆಲ್ಲರೂ ಕಲೆಕ್ಟರೇಟ್ ಸಭಾಂಗಣದಲ್ಲಿ ಹಾಜರಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 14, 2024 12:12 PM