ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ! ಚಿಕ್ಕಮಗಳೂರಿಗೆ ಹೊಷ ವರ್ಷಾಚರಣೆಗೆ ಬಂದು ರಂಪಾಟ

Edited By:

Updated on: Jan 01, 2026 | 9:49 AM

ಹೊಸ ವರ್ಷದ ಆಚರಣೆಗೆಂದು ಬೆಂಗಳೂರಿನಿಂದ ಸ್ನೇಹಿತರ ಜತೆ ಚಿಕ್ಕಮಗಳೂರಿಗೆ ಬಂದ ಪೊಲೀಸ್ ಕಾನ್​ಸ್ಟೇಬಲ್ ಪುನೀತ್ ಎಂಬಾತ ಚಹಾ ಕೊಡುವುದು ತಡವಾಗಿದ್ದಕ್ಕೆ ಟೀ ಅಂಗಡಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಅಂಗಡಿಯನ್ನು ಧ್ವಂಸ ಮಾಡಿದ ಘಟನೆ ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇಲ್ಲಿದೆ.

ಚಿಕ್ಕಮಗಳೂರು, ಜನವರಿ 1: ಬೆಂಗಳೂರಿನಿಂದ ಹೊಸ ವರ್ಷದ ಆಚರಣೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ರಂಪಾಟ ಮಾಡಿರುವುದು ವರದಿಯಾಗಿದೆ. ಚಹಾ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೀಸಲು ಪೊಲೀಸ್ ಪಡೆಯ ಕೋರಮಂಗಲದ ಸಿಬ್ಬಂದಿ ಪುನೀತ್ ಹಲ್ಲೆ ಮಾಡಿದ್ದಾರೆ.

ಮುಂಜಾನೆ ಸಮಯದಲ್ಲಿ ಪುನೀತ್ ಮತ್ತು ಅವರ ಸ್ನೇಹಿತರು ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಗೆ ತೆರಳಿದ್ದರು. ಈ ವೇಳೆ ಟೀ ಕೊಡಲು ತಡವಾದುದರಿಂದ ಕೋಪಗೊಂಡ ಪುನೀತ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸ್ ಟೀ ಅಂಗಡಿಯಲ್ಲಿ ದಾಂಧಲೆ ಎಬ್ಬಿಸಿ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪೊಲೀಸ್ ಕಾನ್​ಸ್ಟೇಬಲ್ ಪುನೀತ್​​ನನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ