ಎಣ್ಣೆ ಮತ್ತಲ್ಲಿ ರಾದ್ಧಾಂತ ಮಾಡಿದ್ದ ವ್ಯಕ್ತಿಗೆ ವಿನೂತನ ಶಿಕ್ಷೆ: ಕೋರ್ಟ್​​ನಿಂದ ಪರಿಸರ ಸ್ನೇಹಿ ತೀರ್ಪು

Edited By:

Updated on: Sep 02, 2026 | 10:16 PM

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದ ವ್ಯಕ್ತಿಗೆ ಚಿಕ್ಕೋಡಿಯ ಜೆಎಂಎಫ್‌ಸಿ ನ್ಯಾಯಾಲಯ 50 ಗಿಡಗಳನ್ನು ನೆಡುವಂತೆ ಆದೇಶ ಹೊರಡಿಸಿ ಗಮನ ಸೆಳೆದಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ (31) ಎಂಬಾತ ಸದಾಲಗಾ ಪೊಲೀಸ್ ಠಾಣಾ ವ್ಯಾಪ್ತಿಯ ಯಕ್ಸಂಬಾ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವಿಸಿ, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಕಂಡು ಜೋರಾಗಿ ಕೂಗಾಡಿ, ಅಸಭ್ಯವಾಗಿ ವರ್ತಿಸಿ ತೊಂದರೆ ಉಂಟುಮಾಡಿದ್ದ.

ಚಿಕ್ಕೋಡಿ(ಬೆಳಗಾವಿ), (ಸೆಪ್ಟೆಂಬರ್ 02) : ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದ ವ್ಯಕ್ತಿಗೆ ಚಿಕ್ಕೋಡಿಯ ಜೆಎಂಎಫ್‌ಸಿ ನ್ಯಾಯಾಲಯ 50 ಗಿಡಗಳನ್ನು ನೆಡುವಂತೆ ಆದೇಶ ಹೊರಡಿಸಿ ಗಮನ ಸೆಳೆದಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ (31) ಎಂಬಾತ ಸದಾಲಗಾ ಪೊಲೀಸ್ ಠಾಣಾ ವ್ಯಾಪ್ತಿಯ ಯಕ್ಸಂಬಾ ಗ್ರಾಮದಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವಿಸಿ, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಕಂಡು ಜೋರಾಗಿ ಕೂಗಾಡಿ, ಅಸಭ್ಯವಾಗಿ ವರ್ತಿಸಿ ತೊಂದರೆ ಉಂಟುಮಾಡಿದ್ದ. ​ಈ ಸಂಬಂಧ ಸಾರ್ವಜನಿಕರ ದೂರಿನ ಅನ್ವಯ ಸದಾಲಗಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ನೂತನ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More