ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯಗೊಂಡ ರಕ್ಷಿತಾಳ ಅಂಗಾಂಗ ದಾನಕ್ಕೆ ಒಪ್ಪಿಕೊಂಡರು ಅವಳ ತಂದೆ-ತಾಯಿ
ರಕ್ಷಿತಾ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಅಂತ ಹೇಳಿದಾಗ ನತದೃಷ್ಟೆಯ ತಂದೆ-ತಾಯಿ ಅವಳ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಆಕಾಲಿಕವಾಗಿ ಮೃತ್ಯುವಿಗೆ ಶರಣಾದರೂ ಆಕೆಯ ದೇಹದ ಪ್ರಮುಖ ಭಾಗಗಳು ಬೇರೆಯವರ ದೇಹಗಳಲ್ಲಿ ಜೀವ ಕಾಣಲಿವೆ.
ಚಿಕ್ಕಮಗಳೂರು ಜಿಲ್ಲೆಯ ಸೋಮನಹಳ್ಳಿ ತಾಂಡಾದ ಯುವತಿ ರಕ್ಷಿತಾ (Rakshita) ಸಾರಿಗೆ ಬಸ್ಸೊಂದರ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಪ್ರಾಣವನ್ನು ಕಳೆದುಕೊಂಡರೂ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ ಮಾರಾಯ್ರೇ. ವೈದ್ಯರು ರಕ್ಷಿತಾ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ (brain-dead) ಅಂತ ಹೇಳಿದಾಗ ನತದೃಷ್ಟೆಯ ತಂದೆ-ತಾಯಿ ಅವಳ ಅಂಗಾಂಗ (organs) ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಆಕಾಲಿಕವಾಗಿ ಮೃತ್ಯುವಿಗೆ ಶರಣಾದರೂ ಆಕೆಯ ದೇಹದ ಪ್ರಮುಖ ಭಾಗಗಳು ಬೇರೆಯವರ ದೇಹಗಳಲ್ಲಿ ಜೀವ ಕಾಣಲಿವೆ.