ಡಿಕೆಶಿ ಜನಸ್ಪಂದನ ಕಾರ್ಯಕ್ರಮದಲ್ಲಿ ಗಣಪತಿಗೆ ಹಣ ಕೇಳಿದ ಮಕ್ಕಳು, ಡಿಸಿಎಂ ಏನಂದ್ರ ನೋಡಿ

|

Updated on: Sep 01, 2024 | 4:50 PM

ಗಣೇಶ ಚತುರ್ಥಿಯು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಗಣೇಶ ಚತುರ್ಥಿ (Ganesh Festival) ಬಂತೆಂದರೆ ಸಾಕು ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ತಮ್ಮ ಊರು ಮನೆಗಳಲ್ಲಿ ಗಣೇಶನನ್ನು ಕೂರಿಸುತ್ತಾರೆ. ಅದರಂತೆ ಕನಕಪುರದಲ್ಲಿಂದು ಮಕ್ಕಳು ಗಣೇಶ ಕೂರಿಸಲು ಡಿಕೆ ಶಿವಕುಮಾರ್ ಹತ್ತಿರ ಹಣ ಕೇಳಿರುವ ಪ್ರಸಂಗ ನಡೆಯಿತು.

ರಾಮನಗರ, (ಸೆಪ್ಟೆಂಬರ್ 01): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಕ್ಷೇತ್ರ ಕನಕಪುರದಲ್ಲಿಂದು ಜನಸ್ಪಂದನ ಕಾರ್ಯಕ್ರಮ ನಡೆಸಿದರು. ಈ ವೇಳೆ ಮಕ್ಕಳು ಬಂದು ಡಿಕೆ ಶಿವಕುಮಾರ್ ಅವರಿಗೆ ಗಣಪತಿ ಕೂರಿಸಲು ಹಣ ಕೇಳಿದರು. ಹೌದು..ಗಣಪತಿ ಕೂರಿಸಲು ಸಂಘ ಸಂಸ್ಥೆಗಳು ಸಾರ್ವಜನಿಕರ ಹತ್ತಿರ ಫಂಡ್ ಕಲೆಕ್ಟ್ ಮಾಡುತ್ತವೆ. ಅದರಂತೆ ಅದರಂತೆ ಕನಕಪುರದಲ್ಲಿಂದು ಮಕ್ಕಳು ಗಣೇಶ ಕೂರಿಸಲು ಡಿಕೆ ಶಿವಕುಮಾರ್ ಹತ್ತಿರ ಹಣ ಕೇಳಿರುವ ಪ್ರಸಂಗ ನಡೆಯಿತು. ಈ ವೇಳೆ ಡಿಕೆ ಶಿವಕುಮಾರ್, ಎಂಪಿ ಬರುತ್ತಾರೆ ಹಣ ಕೊಡುತ್ತಾರೆ ನಡೆಯಿರಿ ನಡೆಯಿರಿ ನಡೆಯಿರಿ ಎಂದರು.

Follow us on