ಕೊಲ್ಲೂರು ಮೂಕಾಂಬಿಕೆ ದರ್ಶನ್ ಮಾಡಿದ ಜೂ ಎನ್ಟಿಆರ್
Jr NTR: ನಿನ್ನೆಯೇ ಕುಟುಂಬದೊಡನೆ ಕರ್ನಾಟಕಕ್ಕೆ ಆಗಮಿಸಿರುವ ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ ಇಂದು ಕೊಲ್ಲೂರು ಮೂಕಾಂಭಿಕೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಸಹ ಜೊತೆಗಿದ್ದರು.
ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ್ದಾರೆ. ನಿನ್ನೆ, ಪತ್ನಿ ಮತ್ತು ತಾಯಿಯ ಜೊತೆಗೆ ಮಂಗಳೂರಿಗೆ ಬಂದಿಳಿದ ಜೂ ಎನ್ಟಿಆರ್ ಅವರನ್ನು ನಟ ರಿಷಬ್ ಶೆಟ್ಟಿ ಸ್ವಾಗತಿಸಿದರು. ಜೂ ಎನ್ಟಿಆರ್ ತಾಯಿಯವರ ಆಸೆಯಂತೆ ಅವರ ಹುಟ್ಟೂರಾದ ಕುಂದಾಪುರಕ್ಕೆ ಕರೆತಂದಿದ್ದರು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿಸಿದರು. ನಿನ್ನೆ ಜೂ ಎನ್ಟಿಆರ್ ಕುಟುಂಬದ ಜೊತೆಗೆ ರಿಷಬ್ ಶೆಟ್ಟಿ ಕುಟುಂಬ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಸಹ ಸೇರಿಕೊಂಡಿತ್ತು. ಇಂದು ಸಹ ಜೂ ಎನ್ಟಿಆರ್ ಅವರ ಟೆಂಪಲ್ ರನ್ ಮುಂದುವರೆದಿದ್ದು, ಇಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದೂ ಸಹ ಜೂ ಎನ್ಟಿಆರ್ಗೆ ರಿಷಬ್ ಶೆಟ್ಟಿ ಹಾಗೂ ನೀಲ್ ಜೊತೆಯಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ

