Puneeth Rajkumar: ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ; ಕಂಬನಿ ಮಿಡಿದ ಚಿರಂಜೀವಿ

Edited By:

Updated on: Oct 30, 2021 | 5:44 PM

Chiranjeevi: ನಟ ಚಿರಂಜೀವಿ ಪುನೀತ್ ಅವರ ಅಂತಿಮ ದರ್ಶನ ಪಡೆದು, ಶಿವರಾಜ್​ ಕುಮಾರ್ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಅವರು ಡಾ.ರಾಜಕುಮಾರ್ ಕುಟುಂಬದ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ, ನಟ ಚಿರಂಜೀವಿ ನಮನ ಸಲ್ಲಿಸಿದ್ದಾರೆ. ನಂತರ ಅವರು ಡಾ.ರಾಜಕುಮಾರ್ ಕುಟುಂಬದ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. ‘‘ರಾಜ್‌ಕುಮಾರ್ ಕುಟುಂಬ ಎಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ. ಒಪ್ಪಿಕೊಳ್ಳಲು ಕಷ್ಟಕರವಾಗಿದೆ. ಭಗವಂತ ಪುನೀತ್​ಗೆ ಅನ್ಯಾಯ ಮಾಡಿದ್ದಾರೆ. ಆ ದೇವರೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಬೆಂಗಳೂರಿಗೆ ಯಾವಾಗ ಬಂದರೂ ಅವರನ್ನ ಭೇಟಿಯಾಗುತ್ತಿದ್ದೆ. ಡಾ.ರಾಜ್‌ಕುಮಾರ್ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆ. ಅವರ ಕುಟುಂಬಸ್ಥರ ಜತೆ ಯಾವಾಗಲೂ ಮಾತನಾಡುತ್ತಿದ್ದೆ. ಇತ್ತೀಚೆಗೆ ಪುನೀತ್, ಶಿವರಾಜ್‌ಕುಮಾರ್‌ರನ್ನು ಭೇಟಿಯಾಗಿದ್ದೆ. ಪುನೀತ್ ಬಹಳ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಪುನೀತ್ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ’’ ಎಂದು ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.

ಪುನೀತ್ ಅಂತಿಮ ದರ್ಶನ ಪಡೆದ ಹಾಸ್ಯ ನಟ ಅಲಿ, ರಾಜ್‌ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಂಡು ಹೋಗ್ತಾರೆ. ಭಗವಂತ ಇಚ್ಛೆ ಏನೆಂದು ಯಾರಿಗೂ ಗೊತ್ತಿರುವುದಿಲ್ಲ. ಕನ್ನಡ ಚಿತ್ರರಂಗ ಒಳ್ಳೆಯ ನಟನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ ಅವರು, ಪುನೀತ್ ಸದಾ ನನ್ನನ್ನು ಅಣ್ಣ ಎಂದು ಕರೆಯುತ್ತಿದ್ದರು ಎಂದು ಅವರು ಸ್ಮರಿಸಿಕೊಂಡಿದ್ದಾರೆ.

 ಇದನ್ನೂ ಓದಿ:

ಶಿವರಾಜ್​ಕುಮಾರ್​ ಅವರನ್ನು ಬಿಗಿದಪ್ಪಿ ಅತ್ತ ಜ್ಯೂ.ಎನ್​ಟಿಆರ್​

Puneeth Rajkumar: ಅಳುತ್ತಾ ಅಪ್ಪು ಬಗ್ಗೆ ಮಾತಾಡಿದ ರಮ್ಯಾ; ಕೆಲವೇ ದಿನಗಳ ಹಿಂದೆ ನಡೆದಿತ್ತು ಕಮ್​ಬ್ಯಾಕ್​​ ಚರ್ಚೆ​