AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಭಕ್ತರಿಂದ 15 ಲಕ್ಷ ರೂ. ಕಾಣಿಕೆ ಹಣ ಸಂಗ್ರಹ

ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಭಕ್ತರಿಂದ 15 ಲಕ್ಷ ರೂ. ಕಾಣಿಕೆ ಹಣ ಸಂಗ್ರಹ

ಮಾಲಾಶ್ರೀ ಅಂಚನ್​
|

Updated on: Sep 15, 2025 | 2:39 PM

Share

ಚಿತ್ರದುರ್ಗದಲ್ಲಿ 18 ದಿನಗಳ ಕಾಲ ನಡೆದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಭಕ್ತರಿಂದ ಬರೋಬ್ಬರಿ 15 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಹಿಂದೂ ಮಹಾಗಣಪತಿ ಸಮಿತಿಯಿಂದ ನಡೆದ ಈ ಕಾಣಿಕೆ ಎಣಿಕೆಯಲ್ಲಿ ಒಟ್ಟು 15 ಲಕ್ಷ ರೂ. ಹಣ ಸಂಗ್ರಹವಾಗಿದ್ದು, ಅದರಲ್ಲಿ 12.50 ಲಕ್ಷ ರೂ. ನೋಟುಗಳು ಹಾಗೂ 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ.

ಚಿತ್ರದುರ್ಗ, ಸೆಪ್ಟೆಂಬರ್ 15: ಚಿತ್ರದುರ್ಗದಲ್ಲಿ ಮೊನ್ನೆ ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳದ ಆಶ್ರಯದಲ್ಲಿ ನಡೆದ ಹಿಂದೂ ಮಹಾಗಣಪತಿ (Hindu Maha Ganapati) ಉತ್ಸವದಲ್ಲಿ ಭಕ್ತರಿಂದ 15 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. 18 ದಿನಗಳ ಕಾಲ ನಡೆದ ಈ ಮಹಾಗಣಪತಿ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಇದೀಗ ಹಿಂದೂ ಮಹಾಗಣಪತಿ ಸಮಿತಿಯಿಂದ ಈ ಗಣೇಶೋತ್ಸವದಲ್ಲಿ ಸಂಗ್ರಹವಾದ ಕಾಣಿಕೆ ಪೆಟ್ಟಿಗೆಯ ಹಣವನ್ನು ಎಣಿಕೆ  ಮಾಡಲಾಗಿದ್ದು, ಅದರಲ್ಲಿ 12.50 ಲಕ್ಷ ರೂ. ನೋಟುಗಳು ಹಾಗೂ 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ