ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿದಳು, ಎಲ್ಲರೂ ಅಚ್ಚರಿ!
ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿರುವಂತಹ ಅಚ್ಚರಿಯ ಘಟನೆಯೊಂದು ಚಿತ್ರದುರ್ಗದ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದಿದೆ. ನಿನ್ನೆ ಸಂಜೆ ರಾಯರ ಮಠಕ್ಕೆ ವೀಲ್ ಚೇರ್ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ, ಡಿಸೆಂಬರ್ 28: ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿರುವಂತಹ ಅಚ್ಚರಿಯ ಘಟನೆಯೊಂದು ಚಿತ್ರದುರ್ಗದ ರಾಘವೇಂದ್ರಸ್ವಾಮಿ ಮಠ (Raghavendraswamy Math) ದಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ ಮತ್ತು ಅರುಣಾ ದಂಪತಿ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ವಿಕಲಚೇತನ ಪುತ್ರಿ ತೇಜಸ್ವಿನಿ, ಪುತ್ರ ಸಾಗರ್ ಕೂಡ ಜೊತೆಗಿದ್ದರು. ರಕ್ತನಾಳ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ತೇಜಸ್ವಿನಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಳು ಎನ್ನಲಾಗಿದೆ. ನಿನ್ನೆ ಸಂಜೆ ರಾಯರ ಮಠಕ್ಕೆ ವೀಲ್ ಚೇರ್ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos