ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ: ವಿಡಿಯೋ ವೈರಲ್
ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿದೆ. ಹಾಗೆ ನೋಡಿದರೆ ಸರ್ಕಾರಿ ಕಚೇರಿ ದೇವಾಲಯವಿದ್ದಂತೆ. ಆದರೆ, ಸರ್ಕಾರಿ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದ್ದು, ವೈರಲ್ ವಿಡಿಯೋ ಇಲ್ಲಿದೆ.
ಚಿತ್ರದುರ್ಗ, ಅಕ್ಟೋಬರ್ 15: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಪ್ರಯುಕ್ತ ಕಚೇರಿಯಲ್ಲೇ ಪಾರ್ಟಿ ಮಾಡಲಾಗಿದೆ. ಮದ್ಯ ಬೆರೆಸಿದ್ದ ವಾಟರ್ಕ್ಯಾನ್ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿದ್ದಾರೆ. ಸಿಬ್ಬಂದಿ ಮದ್ಯದ ಪಾರ್ಟಿಗೆ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಡಿಡಿಪಿಐ ಮಂಜುನಾಥ್ ಕಾರು ಚಾಲಕ ಮತ್ತಿತರ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ