ಚಿತ್ರದುರ್ಗದ ರೈತ ರಾಜಣ್ಣ ಗೋಳು ಮಂಡ್ಯದಿಂದ ಆಚೆಬಾರದ ಕೃಷಿ ಸಚಿವ ಚಲುವರಾಯಸ್ವಾಮಿಗೆ ಕೇಳಿಸೀತೇ?

Updated on: Aug 07, 2025 | 11:38 AM

ಆರು ಎಕರೆ ಜಮೀನಲ್ಲಿ ಮೆಕ್ಕೆಜೋಳ ಮತ್ತು ಮೂರು ಎಕರೆ ಜಮೀನಲ್ಲಿ ಈರುಳ್ಳಿ ಬೆಳೆಯಲು ಐದೂವರೆಯಿಂದ ಆರು ಲಕ್ಷ ರೂ. ವರೆಗೆ ಖರ್ಚು ಮಾಡಿದ್ದಾರೆ. ಬೀಜ, ಬಿತ್ತನೆ, ಗೊಬ್ಬರ ಅಂತೆಲ್ಲ ರೈತರು ಬಹಳ ಹಣ ಖರ್ಚು ಮಾಡುತ್ತಾರೆ. ರಾಜಣ್ಣ ಕಡಿಮೆ ನೀರು ಅಂತ ಬೋರ್​​ವೆಲ್ ಹೊಡಿಸಿ ಡ್ರಿಪ್ ಇರಿಗೇಷನ್ ಮಾಡಿಸಿಕೊಂಡಿದ್ದಾರೆ. ಬಂಪರ್ ಬೆಳೆಯುವ ಪಡೆಯಲು ಇಟ್ಟುಕೊಂಡಿದ್ದ ಅವರ ಆಸೆ ಮಳೆನೀರಲ್ಲಿ ಕೊಚ್ಚಿಹೋಗಿದೆ.

ಚಿತ್ರದುರ್ಗ, ಆಗಸ್ಟ್ 7: ಮಳೆ ಸುರಿದರೆ ಒಂದು ಸುರಿಯದಿದ್ದರೆ ಮತ್ತೊಂದು. ಭಾರತೀಯ ರೈತನಿಗೆ ಎದುರಾಗೋದು ಅತಿವೃಷ್ಟಿ ಇಲ್ಲದಿದ್ದರೆ ಅನಾವೃಷ್ಟಿ. ಈ ಬಾರಿ ಮಳೆ ಚೆನ್ನಾಗಿ ಆಗಿದೆ, ಸಮೃದ್ಧ ಬೆಳೆಗಳು ಎಂದು ಸಂತಸಪಡುತ್ತಿದ್ದ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರೈತ ರಾಜಣ್ಣ (Rajanna) ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಕಂಗಾಲಾಗಿದ್ದಾರೆ. ಚೆಕ್ ಡ್ಯಾಂ ತುಂಬಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ರಾಜಣ್ಣ ತಮ್ಮ 9 ಎಕರೆ ಜಮೀನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮತ್ತು ಈರುಳ್ಳಿ ನಾಶವಾಗಿ ಹೋಗಿದೆ. ರಾಜಣ್ಣ ಮತ್ತು ಅವರ ಪತ್ನಿ ಸರ್ಕಾರದಿಂದ ಪರಿಹಾರ ರೂಪದಲ್ಲಿ ನೆರವು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:   ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್​ಗೆ ಸವಾಲೆಸೆದ ಪ್ರಧಾನಿ ಮೋದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ