ಚಿತ್ರದುರ್ಗ ಹಿಂದೂ ಮಹಾಗಣಪತಿಯ ಡಿಜೆ ಜಪ್ತಿ, ಡೀಸೆಲ್ ಟ್ಯಾಂಕಿಗೆ​ ನೀರು ಸುರಿದ್ರಾ ಪೊಲೀಸ್ರು?

Updated on: Sep 12, 2025 | 6:13 PM

ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾಗಣತಿಯ ಶೋಭಾಯಾತ್ರೆ ನಾಳೆ(ಸೆ.13) ನಡೆಯಲಿದೆ.ಹೀಗಾಗಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫುಲ್ ಕೇಸರಿಮಯವಾಗಿದೆ. ಹಾಗೇ ಬೀದಿ ಬೀದಿಯಲ್ಲಿ ದೀಪಾಲಂಕಾರ ಕಂಗೊಳಿಸುತ್ತಿದೆ. ಆದ್ರೆ, ಗಣೇಶ ವಿಸರ್ಜನೆಗೆ ಮೆರಗು ನೀಡುವ ಡಿಜೆಯನ್ನೇ ಪೊಲೀಸರು ಜಪ್ತಿ ಮಾಡಿದ್ದಾರೆ. ಹೌದು...ಗಣೇಶ ಶೋಭಾಯಾತ್ರೆಗೆಂದು ತರಲಾಗಿದ್ದ ಡಿಜೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೇ ಡಿಜೆ ವಾಹನದ ಡೀಸೆಲ್ ಟ್ಯಾಂಕ್​​ ಗೆ ನೀರು ಸುರಿದು ಆನ್ ಆಗದಂತೆ ಮಾಡಿದ್ದಾರ ಎಂದು ಮ್ಯಾನೇಜರ್ ಹಾಗೂ ಚಾಲಕ ಆರೋಪ ಮಾಡಿದ್ದಾರೆ.

ಚಿತ್ರದುರ್ಗ, (ಸೆಪ್ಟೆಂಬರ್ 12): ಕೋಟೆನಾಡು ಚಿತ್ರದುರ್ಗದ ಹಿಂದೂ ಮಹಾಗಣತಿಯ ಶೋಭಾಯಾತ್ರೆ ನಾಳೆ(ಸೆ.13) ನಡೆಯಲಿದೆ.ಹೀಗಾಗಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫುಲ್ ಕೇಸರಿಮಯವಾಗಿದೆ. ಹಾಗೇ ಬೀದಿ ಬೀದಿಯಲ್ಲಿ ದೀಪಾಲಂಕಾರ ಕಂಗೊಳಿಸುತ್ತಿದೆ. ಆದ್ರೆ, ಗಣೇಶ ವಿಸರ್ಜನೆಗೆ ಮೆರಗು ನೀಡುವ ಡಿಜೆಯನ್ನೇ ಪೊಲೀಸರು ಜಪ್ತಿ ಮಾಡಿದ್ದಾರೆ. ಹೌದು…ಗಣೇಶ ಶೋಭಾಯಾತ್ರೆಗೆಂದು ತರಲಾಗಿದ್ದ ಡಿಜೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೇ ಡಿಜೆ ವಾಹನದ ಡೀಸೆಲ್ ಟ್ಯಾಂಕ್​​ ಗೆ ನೀರು ಸುರಿದು ಆನ್ ಆಗದಂತೆ ಮಾಡಿದ್ದಾರ ಎಂದು ಮ್ಯಾನೇಜರ್ ಹಾಗೂ ಚಾಲಕ ಆರೋಪ ಮಾಡಿದ್ದಾರೆ.

ಇನ್ನು ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡೀಸೆಲ್ ಟ್ಯಾಂಕ್ ಗೆ ನೀರು ಹಾಕಿ ಅನುಚಿತ ವರ್ತನೆ ಪೊಲೀಸರ ವಿರುದ್ಧ ಹಿಂದೂ ಹಾಗೂ ಬಿಜೆಪಿ ನಾಯಕರು ಸಿಡಿದೆದ್ದಿದ್ದು, ಚಳ್ಳಕೆರೆ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಂಸದ ಗೋವಿಂದ ಕಾರಜೋಳ್ ಪುತ್ರ ಉಮೇಶ್ ಕಾರಜೋಳ ಹಾಗೂ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಪುತ್ರ ಸಿದ್ದಾರ್ಥ , ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಚಿತ್ರದುರ್ಗ ಡಿವೈಎಸ್ಪಿ ಪಿ ಕೆ ದಿನಕರ್ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದಾರೆ. ನಿಮ್ಮ ದೇಶಭಕ್ತಿ ನೋಡಿದ್ದೇನೆ ಸೈಡಿಗೆ ಸರಿಯಿರಿ ಎಂದು ಧರಣಿ ನಿರತರಿಗೆ ಅವಾಜ್ ಹಾಕಿದ್ದಾರೆ.