ಕೊಲೆಗೂ ಮುನ್ನ ಅಪೋಲೋಗೆ ಬಂದಿದ್ದ ರೇಣುಕಾಸ್ವಾಮಿ: ಕೊನೆಯ ದೃಶ್ಯ ವೈರಲ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2024 | 5:56 PM

ನಟ ದರ್ಶನ್ ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರೇಣುಕಾಸ್ವಾಮಿಯ ಕೊಲೆಗೂ ಮುನ್ನ ಕೊನೆಯ ಕ್ಷಣಗಳ ವಿಡಿಯೋ ವೈರಲ್​ ಆಗಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಅಂದರೆ ಜೂನ್ 6 ರಂದು ರಾತ್ರಿ 9:50ಕ್ಕೆ ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಥಂಬ್ ನೀಡಲು ರೇಣುಕಾಸ್ವಾಮಿ ಬಂದಿದ್ದರು. ಜೂನ್ 7 ರಿಂದ ಡ್ಯೂಟಿಗೆ ಬಂದಿರಲಿಲ್ಲ.

ಚಿತ್ರದುರ್ಗ, ಜೂನ್​ 12: ನಟ ದರ್ಶನ್ (Darshan) ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ 17 ಜನರನ್ನು ಬಂಧಿಸಲಾಗಿದೆ. ಇತ್ತ ದುರ್ಗದ ಜನ ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೃತನ ಕುಟುಂಬಸ್ಥರು ಕೂಡ ದರ್ಶನ್ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಇದೆಲ್ಲದರ ಮಧ್ಯೆ ರೇಣುಕಾಸ್ವಾಮಿ (Renukaswamy) ಕೊಲೆಗೂ ಮುನ್ನ ಅಪೋಲೋ ಫಾರ್ಮಸಿಗೆ ಬಂದಿದ್ದ ವಿಡಿಯೋ ವೈರಲ್ ಆಗಿದೆ. ಜೂನ್ 6 ರಂದು ರಾತ್ರಿ 9:50ಕ್ಕೆ ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಥಂಬ್ ನೀಡಲು ರೇಣುಕಾಸ್ವಾಮಿ ಬಂದಿದ್ದರು. ಜೂನ್ 7 ರಿಂದ ಡ್ಯೂಟಿಗೆ ಬಂದಿರಲಿಲ್ಲ. ಹಾಗಾದರೆ ರೇಣುಕಾಸ್ವಾಮಿ ಕೊನೆ ಬಾರಿಗೆ ಅಪೋಲೋಗೆ ಬಂದಿದ್ದು, ಈ ವೇಳೆ ಟಿಶರ್ಟ್ ಧರಿಸಿದ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 5:53 pm, Wed, 12 June 24

Follow us on