ಮುರಾಘಾ ಶ್ರೀಗಳಿಗೆ 14-ದಿನ ನ್ಯಾಯಾಂಗ ಬಂಧನ; ಪುನಃ ಚಿತ್ರದುರ್ಗದ ಸೆಂಟ್ರಲ್ ಜೈಲಿಗೆ ಹೋದ ಶ್ರೀಗಳು
ಪುನಃ ಜೈಲಿಗೆ ಹೋಗಬೇಕಾಗಿ ಬಂದಿದ್ದರಿಂದ ಸ್ವಾಮೀಜಿ ವಿಚಲಿತರೇನೂ ಅಗಿಲ್ಲ. ಅವರು ನಿರಾತಂಕ ಮತ್ತು ನಿರುದ್ವಿಗ್ನತೆಯಿಂದ ನಡೆಸದು ಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. 14 ತಿಂಗಳು ಜೈಲು ಅನುಭವಿಸಿದ ಬಳಿಕ ರಾಜ್ಯ ಉಚ್ಛ ನ್ಯಾಯಾಲಯವು ನವೆಂಬರ್ 15, 2023 ರಂದು ಮುರುಘಾ ಶರಣರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಚಿತ್ರದುರ್ಗ: ಪೋಕ್ಸೋ ಪ್ರಕರಣಗಳಲ್ಲಿ (POCSO cases) ಜೈಲು ಸೇರಿ ಜಾಮೀನು ಪಡೆದು ಹೊರಬಂದಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧೀಶ ಡಾ ಶಿವಮೂರ್ತಿ ಮುರುಘಾ ಶರಣರನ್ನು (Dr Shivamurthy Murugha Sharanaru) ಇಂದು ಪುನಃ ಜೈಲಿಗೆ ಕರೆದೊಯ್ಯಲಾಯಿತು. ಜಿಲ್ಲಾ ಒಂದನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮತ್ತೊಂದು ಪ್ರಕರಣದಡಿಯಲ್ಲಿ ಮುರುಘಾ ಶರಣರನ್ನು 14-ದಿನಗಳ ನ್ಯಾಯಾಂಗ ಬಂಧನದ (judicial custody) ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿ ನಗರದ ಸೆಂಟ್ರಲ್ ಜೈಲಿಗೆ ಕರೆದೊಯ್ದರು. ಜೈಲಿಗೆ ಒಯ್ಯುವ ಮೊದಲು ವೈದ್ಯಕೀಯ ತಪಾಸಣೆಗಾಗಿ ಸ್ವಾಮೀಜಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಅವರ ವಿಚಾರಣೆಯನ್ನು ಮೇ 27 ರಂದು ನಡೆಸಲು ನ್ಯಾಯಾಲಯ ಸೂಚಿಸಿದೆ. ಪುನಃ ಜೈಲಿಗೆ ಹೋಗಬೇಕಾಗಿ ಬಂದಿದ್ದರಿಂದ ಸ್ವಾಮೀಜಿ ವಿಚಲಿತರೇನೂ ಅಗಿಲ್ಲ. ಅವರು ನಿರಾತಂಕ ಮತ್ತು ನಿರುದ್ವಿಗ್ನತೆಯಿಂದ ನಡೆಸದು ಬರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. 14 ತಿಂಗಳು ಜೈಲು ಅನುಭವಿಸಿದ ಬಳಿಕ ರಾಜ್ಯ ಉಚ್ಛ ನ್ಯಾಯಾಲಯವು ನವೆಂಬರ್ 15, 2023 ರಂದು ಮುರುಘಾ ಶರಣರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಯುವತಿಯ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್, ಕ್ರಮ ಕೈಗೊಳ್ಳದ ಪೊಲೀಸರು