Tumakuru: ಬಿಎಸ್ ಯಡಿಯೂರಪ್ಪರನ್ನು ಹೊತ್ತ ಹೆಲಿಕ್ಯಾಪ್ಟರ್ ಲ್ಯಾಂಡ್ ಅಗುವಾಗ ಪುನಃ ಎದುರಾದ ಸಮಸ್ಯೆ, ಹೆಲಿಪ್ಯಾಡ್​ನಲ್ಲಿ ನಾಯಿಗಳು!

|

Updated on: Mar 21, 2023 | 1:49 PM

ಚಾಪರ್ ತನ್ನ ಪಾಡಿಗೆ ತಾನು ಲ್ಯಾಂಡ್ ಅಗುತ್ತಾದರೂ ಆತಂಕಮಯ ವಾತಾವರಣ ಸೃಷ್ಟಿಯಾಗಿದ್ದಂತೂ ಸತ್ಯ. ಕೆಲ ವಾರಗಳ ಹಿಂದೆ ಅವರು ಕಲಬುರ್ಗಿಗೆ ಆಗಮಿಸಿದಾಗ ಕಸ, ಪ್ಲಾಸ್ಟಿಕ್ ಡ್ರಮ್ ಮೊದಲಾದವು ಹಾರಾಡಿ ಹೆಲಿಪ್ಯಾಡ್ ಕಾಣದಂಥ ಸನ್ನಿವೇಶ ನಿರ್ಮಾಣವಾಗಿತ್ತು

ತುಮಕೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರರನ್ನು ಹೊತ್ತ ಹೆಲಿಕಾಪ್ಟರ್ ಲ್ಯಾಂಡ್ ಅಗುವಾಗ ಪದೇಪದೆ ಸಮಸ್ಯೆಗಳು ಎದುರಾಗುತ್ತಿವೆ ಮಾರಾಯ್ರೇ. ಇಲ್ಲಿ ನೋಡಿ, ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijaya Sankalp Yatre) ಅವರು ಪಾಲ್ಗೊಳ್ಳಲು ಹಸಿರು ಬಣ್ಣದ ಹೆಲಿಕಾಪ್ಟರ್ ನಲ್ಲಿ (helicopter) ತುಮಕೂರಿಗೆ ಆಗಮಿಸಿದಾಗ ಎರಡು ನಾಯಿಗಳು ಬೊಗಳುತ್ತಾ ಹೆಲಿಪ್ಯಾಡ್ ನತ್ತ ಓಡಿಬಂದು ಆತಂಕ ಸೃಷ್ಟಿಸಿದವು. ಚಾಪರ್ ತನ್ನ ಪಾಡಿಗೆ ತಾನು ಲ್ಯಾಂಡ್ ಅಗುತ್ತಾದರೂ ಆತಂಕಮಯ ವಾತಾವರಣ ಸೃಷ್ಟಿಯಾಗಿದ್ದಂತೂ ಸತ್ಯ. ಕೆಲ ವಾರಗಳ ಹಿಂದೆ ಅವರು ಕಲಬುರ್ಗಿಗೆ ಆಗಮಿಸಿದಾಗ ಕಸ, ಪ್ಲಾಸ್ಟಿಕ್ ಡ್ರಮ್ ಮೊದಲಾದವು ಹಾರಾಡಿ ಹೆಲಿಪ್ಯಾಡ್ ಕಾಣದಂಥ ಸನ್ನಿವೇಶ ನಿರ್ಮಾಣವಾಗಿತ್ತು. ಪೈಲಟ್ ಚಾಪರನ್ನು ಪುನಃ ಮೇಲಕ್ಕೆ ಹಾರಿಸಿ ಸ್ವಲ್ಪ ಸಮಯದ ಬಳಿಕ ಅದನ್ನು ಹೆಲಿಪ್ಯಾಡ್ ನಲ್ಲಿ ಇಳಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ