ಬೆಂಗಳೂರು: ವಸತಿ ಖಾತೆ ಸಚಿವ ವಿ ಸೋಮಣ್ಣ (V Somanna) ಅವರು ಬಿಜೆಪಿ ತೊರೆಯುವ ಕಾಲ ಹತ್ತಿರವಾಗುತ್ತಿದೆಯೇ? ನಿನ್ನೆ ಸೋಮಣ್ಣ ಹಾಗೂ ಕೆಸಿ ನಾರಾಯಣಗೌಡ ಜೊತೆ ಮಾತಾಡುವುದಾಗಿ ಹೇಳಿದ್ದ ಬಿಎಸ್ ಯಡಿಯೂರಪ್ಪನವರು (BS Yediyurappa) ಇವತ್ತು ಹೋಗೋರನ್ನ ನಿಲ್ಲಿಸಕ್ಕಾಗಲ್ಲ ಅಂತ ಹೇಳಿದ್ದಾರೆ. ನಗರದಲ್ಲಿದು ಈ ಸಂಗತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಮುಂದೆ ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ಯಡಿಯೂರಪ್ಪನವರು ಹೇಳಿದ್ದು ಸರಿಯಿದೆ, ಹೋಗೋರನ್ನು ತಡೆಯಯಲಾಗಲ್ಲ ಅನ್ನೋದು ನಿಜ, ಅವರು ಯಾರ್ಯಾರನ್ನು ಕಳಿಸುತ್ತಾರೋ ಕಳಿಸಲಿ, ನಾವು ಅವರ ಬಗ್ಗೆ ಯೋಚನೆ ಮಾಡ್ತೀವಿ,’ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ