Underprepared Helipad: ಜೇವರ್ಗಿ ನಗರದ ಹೊರವಲಯದಲ್ಲಿ ಲ್ಯಾಂಡ್ ಆಗುವ ಮೊದಲು ಸಮಸ್ಯೆ ಎದುರಿಸಿದ ಬಿಎಸ್ ಯಡಿಯೂರಪ್ಪ ಹೆಲಿಕಾಪ್ಟರ್
ಆ ಸ್ಥಿತಿಯಲ್ಲಿ ಚಾಪರ್ ಲ್ಯಾಂಡ್ ಮಾಡಿದರೆ ಅಪಾಯ ತಪ್ಪಿದ್ದಲ್ಲ ಅಂತ ಮನವರಿಕೆ ಮಾಡಿಕೊಂಡ ಪೈಲಟ್ ಲ್ಯಾಂಡ್ ಮಾಡದೆ ಅದೇ ಜಾಗದಲ್ಲಿ ಮತ್ತೆರಡು ಸುತ್ತು ಹಾಕಿ ನಂತರ ಲ್ಯಾಂಡ್ ಮಾಡಿಸುತ್ತಾರೆ.
ಕಲಬುರಗಿ: ಜಿಲ್ಲೆಯ ಪ್ರವಾಸ ತೆರಳಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು (BS Yediyurappa) ಜೇವರ್ಗಿ ತಲುಪಿದಾಗ ಅವರನ್ನು ಹೊತ್ತ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಮೊದಲು ದೊಡ್ಡ ಸಮಸ್ಯೆ ಎದುರಾಯಿತು. ಜಿಲ್ಲಾಡಳಿತ (district administration) ಮತ್ತು ತಾಲ್ಲೂಕು ಅಧಿಕಾರಿಗಳು ಹೆಲಿಪ್ಯಾಡ್ (helipad) ನಿರ್ಮಿಸುವಾಗ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸದ ಕಾರಣ ಹೆಲಿಕಾಪ್ಟರ್ ಚಕ್ರ ಸೃಷ್ಟಿಸುವ ಜೋರುಗಾಳಿಗೆ ಅಲ್ಲಿದ್ದ ಕಸ, ಪ್ಲಾಸ್ಟಿಕ್ ಚೀಲಗಳು, ಡ್ರಮ್ ಹಾರಲಾರಂಭಿಸಿದವು. ಆ ಸ್ಥಿತಿಯಲ್ಲಿ ಚಾಪರ್ ಲ್ಯಾಂಡ್ ಮಾಡಿದರೆ ಅಪಾಯ ತಪ್ಪಿದ್ದಲ್ಲ ಅಂತ ಮನವರಿಕೆ ಮಾಡಿಕೊಂಡ ಪೈಲಟ್ ಲ್ಯಾಂಡ್ ಮಾಡದೆ ಅದೇ ಜಾಗದಲ್ಲಿ ಮತ್ತೆರಡು ಸುತ್ತು ಹಾಕಿ ನಂತರ ಲ್ಯಾಂಡ್ ಮಾಡಿಸುತ್ತಾರೆ. ಜಿಲ್ಲಾಡಳಿಯ ಮತ್ತು ಸ್ಥಳೀಯ ಅಧಿಕಾರಿಗಳು ಸರ್ಕಾರದಿಂದ ತರಾಟೆಗೊಳಗಾಗುವುದು ನಿಶ್ಚಿತ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 06, 2023 02:35 PM
Latest Videos