ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಒಂದು ಬಣಕ್ಕೆ ಸಚಿವ ಕೆಸಿ ನಾರಾಯಣಗೌಡ (KC Narayana Gowda) ಪಕ್ಷ ಸೇರುವುದು ಬೇಕಿಲ್ಲ. ಮಾರ್ಚ್ 13 ರಂದು ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಕೆಆರ್ ಪೇಟೆಗೆ (KR Pet) ಆಗಮಿಸಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಪಟ್ಟಣದಲ್ಲಿ ನಡೆದ ಇಂದಿನ ಸಭೆಯಲ್ಲಿ ಕಾರ್ಯಕರ್ತರು ನಾರಾಯಣಗೌಡರ ಸೇರ್ಪಡೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಪ್ರಜಾಧ್ವನಿಯಾತ್ರೆ ಮಂಡ್ಯ ಜಿಲ್ಲೆಗೆ ಬರಲು ಬಿಡಲ್ಲ ಅಂತ ಕೆಲ ಕಾರ್ಯಕರ್ತರು ಕೂಗುತ್ತಿದ್ದರೆ ಉಳಿದವರು ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ