ಅಮೆರಿಕ ಬಿಟ್ಟು ಹೋಗಿರುವ ವಿಮಾನ, ಯುದ್ಧ ಸಾಮಗ್ರಿಗಳು ಗುಜರಿಗೆ ಹಾಕಲು ಮಾತ್ರ ಯೋಗ್ಯ! ತಾಲಿಬಾನಿಗಳಿಗೆ ಶಾಕ್​!!

ಅಮೆರಿಕ ಬಿಟ್ಟು ಹೋಗಿರುವ ವಿಮಾನ, ಯುದ್ಧ ಸಾಮಗ್ರಿಗಳು ಗುಜರಿಗೆ ಹಾಕಲು ಮಾತ್ರ ಯೋಗ್ಯ! ತಾಲಿಬಾನಿಗಳಿಗೆ ಶಾಕ್​!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 9:19 PM

ಅದನ್ನೆಲ್ಲ ನೋಡಿದ ತಾಲಿಬಾನಿಗಳು ತಾವು ಸಹ ಈಗ ಸೂಪರ್ ಪವರ್ ಅಂತ ಬೀಗಿದರು. ಪಂಜಶೀರ್ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಳ್ಳಲು ನಮಗೆ ಅರ್ಧ ದಿನವೂ ಬೇಕಿಲ್ಲ ಅಂದುಕೊಂಡವರಿಗೆ ಅಮೆರಿಕನ್ನರು ಚೇತರಿಸಿಕೊಳ್ಳಲಾಗದ ಆಘಾತ ನೀಡಿದ್ದಾರೆ.

ನಾವು ಚಾಪೆ ಕೆಳಗೆ ನುಗ್ಗಿದರೆ ಅಮೆರಿಕನ್ನರು ರಂಗೋಲಿ ಕೆಳಗೆ ನುಗ್ತಾರೆ ಅನ್ನೋದು ತಾಲಿಬಾನಿಗಳಿಗೆ ತಡವಾಗಿ ಅರ್ಥವಾಗಿದೆ. ನಿಮಗೆ ಗೊತ್ತಿದೆ. 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಅಮೇರಿಕ, ಬ್ರಿಟನ್ ಮತ್ತು ನ್ಯಾಟೊ ಸೇನೆಗಳು ಮಂಗಳವಾರದಂದು ತಮ್ಮ ದೇಶಗಳಿಗೆ ವಾಪಸ್ಸಾದವು. ಹೋಗುವಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಮೊದಲಾದವುಗಳನ್ನು ಅಫ್ಘಾನಿಸ್ತಾನದಲ್ಲೇ ಬಿಟ್ಟರು. ಅವುಗಳನ್ನು ನೋಡಿದ ತಾಲಿಬಾನಿಗಳು ಹಿಗ್ಗಿ ಹೀರೆಕಾಯಿಯಾಗಿದ್ದರು. ಅಮೆರಿಕ ಸುಮಾರು 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಬಿಟ್ಟು ಹೋಗಿದೆಯೆಂದು ವರದಿಯಾಗಿತ್ತು.

ಅದನ್ನೆಲ್ಲ ನೋಡಿದ ತಾಲಿಬಾನಿಗಳು ತಾವು ಸಹ ಈಗ ಸೂಪರ್ ಪವರ್ ಅಂತ ಬೀಗಿದರು. ಪಂಜಶೀರ್ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಳ್ಳಲು ನಮಗೆ ಅರ್ಧ ದಿನವೂ ಬೇಕಿಲ್ಲ ಅಂದುಕೊಂಡವರಿಗೆ ಅಮೆರಿಕನ್ನರು ಚೇತರಿಸಿಕೊಳ್ಳಲಾಗದ ಆಘಾತ ನೀಡಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಉಗ್ರಾಣದಲ್ಲಿದ್ದ ತಮ್ಮ ಹೆಲಿಕಾಪ್ಟರ್, ಯುದ್ಧವಿಮಾನ ಮತ್ತು ಇತರ ಯುದ್ಧ ಸಾಮಗ್ರಿಳನ್ನು ಅವರು ಬಳಸಲು ಬಾರದ ಹಾಗೆ ನಿಷ್ಕ್ರಿಯಗೊಳಿಸಿ ಹೋಗಿದ್ದಾರೆ!

ಅವುಗಳನ್ನು ರಿಪೇರಿ ಮಾಡಲು ಬಾರದ ಹಾಗೆ ಕೆಡಿಸಲಾಗಿದೆ ಎಂದು ಅಫ್ಘಾನಿಸ್ತಾನದ ಹೇಳಿರುವ ಪತ್ರಕರ್ತ ನಬಿ ಒಂದು ವಿಡಿಯೊವನ್ನು ಅವರು ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೀವು ವಿಡಿಯೋನಲ್ಲಿ ಗಮನಿಸುವ ಹಾಗೆ, ಅಮೆರಿಕ ಬಿಟ್ಟು ಹೋಗಿರುವ ಚಿನೂಕ್ ಹೆಲಿಕಾಪ್ಟರ್ಗಳನ್ನು ತಾಲಿಬಾನಿಗಳು ಪರಿಶೀಲಿಸುತ್ತಿದ್ದಾರೆ. ಹೆಲಿಕಾಪ್ಟರ್, ಯುದ್ಧ ವಿಮಾನಗಳಲ್ಲದೆ ಶಸ್ತ್ರಾಸ್ತ್ರವುಳ್ಳ ವಾಹನ ಮತ್ತು ಹೈ-ಟೆಕ್ ರಾಕೆಟ್ ಡಿಫೆನ್ಸ್ ಸಿಸ್ಟಮ್ ಮೊದಲಾದವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಸೇನೆಯ ಮುಖ್ಯಸ್ಥರಾಗಿದ್ದ ಕೆನ್ನೆತ್ ಮೆಕೆಂಜಿ, ಕಾಬೂಲಿನ ಹಮೀದ್ ಕರ್ಜಾಯೀ ವಿಮಾನ ನಿಲ್ದಾಣದ ಉಗ್ರಾಣದಲ್ಲಿದ್ದ 73 ವಿಮಾನಗಳನ್ನು ‘ಡಿಮಿಲಿಟರೈಸ್’ ಮಾಡಿ ನಿರುಪಯೋಗ ವಸ್ತುಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hurricane Ida: ಅಮೆರಿಕದ ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಸದ್ಯದ ಪರಿಸ್ಥಿತಿಯ ವಿಡಿಯೋ ವೈರಲ್