ಹೊಸ ತಲೆಮಾರಿನ ಪೋನ್ ಉತ್ಪಾದನೆ ಗೋಜಿಗೆ ಹೋಗಲ್ಲವೆಂದಿದ್ದ ವಿವೊ X70 ಸರಣಿಯ ಫೋನ್​ಗಳನ್ನು ಲಾಂಚ್ ಮಾಡಲಿದೆ

ವಿವೋ ಎಕ್ಸ್ 70 ಪ್ರೊ+ 6.7-ಇಂಚಿನ AMOLED ಪ್ಯಾನಲ್, ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್ ಮತ್ತು 65W ಫಾಸ್ಟ್ ಚಾರ್ಜಿಂಗ್ ಒಳಗೊಂಡಿರುವಂತೆ ಈ ಮಾಡೆಲ್​​ಗಳ ಕೆಲ ವಿಶೇಷತೆಗಳು ಸೋರಿಕೆಗಳ ಮೂಲಕ ಬಹಿರಂಗಗೊಂಡಿವೆ.

ಹೊಸ ತಲೆಮಾರಿನ ಪೋನ್ ಉತ್ಪಾದನೆ ಗೋಜಿಗೆ ಹೋಗಲ್ಲವೆಂದಿದ್ದ ವಿವೊ X70 ಸರಣಿಯ ಫೋನ್​ಗಳನ್ನು ಲಾಂಚ್ ಮಾಡಲಿದೆ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 7:43 PM

ಹೊಸ X60 ತಲೆಮಾರಿನ ಫೋನ್ಗಳನ್ನು ಉತ್ಪಾದಿಸುವ ಗೋಜಿಗೆ ಹೋಗುವುದಿಲ್ಲ ಅನ್ನುತ್ತಿದ್ದ ಚೀನಾದ ವಿವೊ ಮೊಬೈಲ್ ಕಂಪನಿಯು ಈಗ ಈ ಲೈನಪ್ನ ಸೆಟ್ಗಳನ್ನು ತಯಾರು ಮಾಡಿದ್ದೂ ಅಲ್ಲದೆ ಮಾರ್ಕೆಟ್ಗೆ ಬಿಡುಗಡೆ ಮಾಡುವ ಸಿದ್ಧತೆಗಳನ್ನೂ ನಡೆಸಿದೆ. ಎಲ್ಲವೂ ವಿವೊ ಕಂಪನಿ ಅಂದುಕೊಂಡಂತೆ ನಡೆದರೆ ಈ ಸಂಸ್ಥೆಯ ಮೂರು ಹೈ ಎಂಡ್ ಮೊಬೈಲ್ ಪೋನ್ಗಳು ಸೆಪ್ಟೆಂಬರ್ 9 ರಂದು ಮಾರ್ಕೆಟ್ ನಲ್ಲಿ ಲಭ್ಯವಾಗಲಿವೆ. ಮೊದಲಿಗೆ ವಿವೊ X70, ವಿವೊ X70 ಪ್ರೊ ಮತ್ತು ವಿವೊ X70 ಪ್ರೊ+ ಫೋನ್ಗಳ ಚಿತ್ರಗಳು ಆನ್ಲೈನ್ ನಲ್ಲಿ ಲೀಕ್ ಆಗಿದ್ದವು. ಆದರೆ, ಖುದ್ದು ಕಂಪನಿಯೇ ಈಗ ಈ ಮೂರು ಮಾಡೆಲ್ಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದೂ ಅಲ್ಲದೆ ಅವುಗಳನ್ನು ಸೆಪ್ಟೆಂಬರ್ 9 ರಂದು ಲಾಂಚ್ ಮಾಡುವುದಾಗಿಯೂ ಹೇಳಿದೆ.

ಚಿತ್ರಗಳನ್ನು ನೋಡುತ್ತಿದ್ದರೆ, ವಿವೊನ ಹೈ ಎಂಡ್ ಮಾಡೆಲ್ ಹಿಂಭಾಗ ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು ಎಮ್ಐ 11 ಅಲ್ಟ್ರಾ ಮಾಡೆಲ್ ನೊಂದಿಗೆ ಹೋಲುತ್ತದೆ. ಆದರೆ, ಈ ಡಿವೈಸ್ ಎರಡನೇ ಡಿಸ್ಪ್ಲೇ ಲಭ್ಯವಿಲ್ಲ. ಉಳಿದೆರಡು ಮಾಡೆಲ್ ಕೆಮೆರಾ ಮಾಡ್ಯೂಲ್ಗಳಲ್ಲೂ ಬದಲಾವಣೆಗಳಿರುವ ನಿರಿಕ್ಷೆಯಿದೆ. ಜೀಸ್ ಆಪ್ಟಿಕ್ಗಳೊಂದಿಗೆ ವಿವೊ ಹೊಂದಿರುವ ಸುದೀರ್ಘ ಬಾಂಧವ್ಯ X70 ಸರಣಿಯೊಂದಿಗೂ ಮುಂದುವರಿಯುತ್ತಿದೆ. ಇದರೊಂದಿಗೆ V1 ಎಂದು ಕರೆಸಿಕೊಳ್ಳುವ ಕಸ್ಟಮ್-ಮೇಡ್ ಇಮೇಜ್ ಸಿಗ್ನಲಿಂಗ್ (ಐಎಸ್ಪಿ) ಸಹ ಈ ಸರಣಿಯ ಪೋನ್ಗಳಿಗೆ ಲಭ್ಯವಾಗಲಿದೆ.

ವಿವೋ ಎಕ್ಸ್ 70 ಪ್ರೊ+ 6.7-ಇಂಚಿನ AMOLED ಪ್ಯಾನಲ್, ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್ ಮತ್ತು 65W ಫಾಸ್ಟ್ ಚಾರ್ಜಿಂಗ್ ಒಳಗೊಂಡಿರುವಂತೆ ಈ ಮಾಡೆಲ್​​ಗಳ ವಿಶೇಷತೆಗಳು ಸೋರಿಕೆಗಳ ಮೂಲಕ ಬಹಿರಂಗಗೊಂಡಿದೆ. ವಿವೋ ಎಕ್ಸ್ 70 ಮತ್ತು ವಿವೋ ಎಕ್ಸ್ 70 ಪ್ರೊ ಮತ್ತು ವಿವೊ ಎಕ್ಸ್ 70 ಪ್ರೊ ಬೆಲೆ ರೂ. 50,000 ಗಳಿಂದ ರೂ. 70,000 ಗಳವರೆಗೆ ಇರಲಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ:  ಬಂದಿದೆ ಜಿಯೋ ಹೊಸ ಶ್ರೇಣಿಯ 5 ಪ್ರಿಪೇಯ್ಡ್ ಯೋಜನೆಗಳು: ಜಿಯೋ ಬಳಕೆದಾರರು ಈಗ ಎಲ್ಲ ವಿಡಿಯೋ ನೋಡಬಹುದು

Follow us