ಐಶ್ವರ್ಯ ಹಾಗೂ ಶಿಲ್ಪಾರಂತೆ ಮತ್ತೊಬ್ಬ ಬಂಟರ ಹುಡುಗಿ ಪೂಜಾ ಹೆಗ್ಡೆಯೂ ಫಿಟ್ನೆಸ್​ಗೆ ಜಾಸ್ತಿ ಗಮನ ನೀಡುತ್ತಾಳೆ!

ಐಶ್ವರ್ಯ ಹಾಗೂ ಶಿಲ್ಪಾರಂತೆ ಮತ್ತೊಬ್ಬ ಬಂಟರ ಹುಡುಗಿ ಪೂಜಾ ಹೆಗ್ಡೆಯೂ ಫಿಟ್ನೆಸ್​ಗೆ ಜಾಸ್ತಿ ಗಮನ ನೀಡುತ್ತಾಳೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 5:24 PM

ನಮ್ಮ ಬಂಟರ ಹುಡುಗಿ ನಿಮಗೆ ಗೊತ್ತಾ ಅಂತ ನಾವು ಕೇಳಿದರೆ, ಶಿಲ್ಪಾ ಶೆಟ್ದಿ ತಾನೆ, ಗೊತ್ತಿಲ್ಲದೆ ಏನು ಮಾರಾಯ್ರೇ ಅಂತ ಹೇಳಬೇಡಿ. ಐಶ್ವರ್ಯ ರೈ ಬಚ್ಟನ್ ಮತ್ತು ಶಿಲ್ಪಾ ಬಿಟ್ಟು ಬೇರೆ ಹುಡುಗಿಯರು ಸಹ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿರುವವಳು ಪೂಜಾ ಹೆಗ್ಡೆ. ತೆರೆಯ ಮೇಲೆ ತೆಳ್ಳಗೆ, ಬೆಳ್ಳಗೆ ಬಳಕುವ ಬಳ್ಳಿಯಂತೆ ಕಾಣುವ ಪೂಜಾಗೆ ಈಗ 30 ರ ಪ್ರಾಯ ಅಂದರೆ ನೀವು ನಂಬ್ತೀರಾ. ಹೌದು, ಫಿಟ್ನೆಸ್ ಫ್ರೀಕ್ ಆಗಿರುವ ಪೂಜಾ ಜಿಮ್ ಗಳಲ್ಲಿ […]

ನಮ್ಮ ಬಂಟರ ಹುಡುಗಿ ನಿಮಗೆ ಗೊತ್ತಾ ಅಂತ ನಾವು ಕೇಳಿದರೆ, ಶಿಲ್ಪಾ ಶೆಟ್ದಿ ತಾನೆ, ಗೊತ್ತಿಲ್ಲದೆ ಏನು ಮಾರಾಯ್ರೇ ಅಂತ ಹೇಳಬೇಡಿ. ಐಶ್ವರ್ಯ ರೈ ಬಚ್ಟನ್ ಮತ್ತು ಶಿಲ್ಪಾ ಬಿಟ್ಟು ಬೇರೆ ಹುಡುಗಿಯರು ಸಹ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಅವರಲ್ಲಿ ಮುಂಚೂಣಿಯಲ್ಲಿರುವವಳು ಪೂಜಾ ಹೆಗ್ಡೆ. ತೆರೆಯ ಮೇಲೆ ತೆಳ್ಳಗೆ, ಬೆಳ್ಳಗೆ ಬಳಕುವ ಬಳ್ಳಿಯಂತೆ ಕಾಣುವ ಪೂಜಾಗೆ ಈಗ 30 ರ ಪ್ರಾಯ ಅಂದರೆ ನೀವು ನಂಬ್ತೀರಾ. ಹೌದು, ಫಿಟ್ನೆಸ್ ಫ್ರೀಕ್ ಆಗಿರುವ ಪೂಜಾ ಜಿಮ್ ಗಳಲ್ಲಿ ನಿಯಮಿತವಾಗಿ ವರ್ಕ್ ಔಟ್ ಮಾಡುವ ಮೂಲಕ ತನ್ನ ಅದ್ಭುತ ಮೈಮಾಟವನ್ನು ಕಾಯ್ದುಕೊಂಡಿದ್ದಾಳೆ.

ಕನ್ನಡ, ತುಳು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡುವ ಪೂಜಾ ಬಹುಭಾಷಾ ತಾರೆ. ಆಕೆಯ ಅರಂಗ್ರೇಟಂ ಆಗಿದ್ದು 2012ರಲ್ಲಿ ಬಿಡುಗಡೆಯಾದ ತಮಿಳು ಚಿತ್ರವೊಂದರ ಮೂಲಕ. ಅಮೇಲೆ ತೆಲುಗಗಿನ ಒಕಾ ಲೈಲಾ ಕೋಸಂ ಚಿತ್ರದಲ್ಲಿ ಆಕೆ ನಟಿಸಿದಳು, 2016ರಲ್ಲಿ ಬಾಲಿವುಡ್​ಗೆ ಕಾಲಿಟ್ಟು ಆ ವರ್ಷ ಬಿಡುಗಡೆಯದ ಮೊಹೆಂಜೋ ದಾರೋ ಚಿತ್ರದಲ್ಲಿ ನಟಿಸಿದಳು.

ಅಲ್ಲಿಂದೀಚೆಗೆ ಆಕೆ ಹಿಂತಿರುಗಿ ನೋಡಿಲ್ಲ. ಬಾಲಿವುಡ್ ಮೂಲಗಳ ಪ್ರಕಾರ ಆಕೆಯ ಕೈಯಲ್ಲೀಗ 4 ಚಿತ್ರಗಳಿವೆ. ಬಾಕ್ಸಾಫೀಸ್ ಕೊಳ್ಳೆ ಹೊಡೆದ ಹೌಸ್​ಫುಲ್​ 4 ರಲ್ಲೂ ಆಕೆ ನಟಿಸಿದ್ದಳು.

ಪೂಜಾಳನ್ನು ಹತ್ತಿರದಿಂದ ಬಲ್ಲವರು ಹೇಳುವ ಹಾಗೆ ಅಕೆ ಫಿಟ್ನೆಸ್ಗೆ ಜಾಸ್ತಿ ಮಹತ್ವ ನೀಡುತ್ತಾಳೆ ಮತ್ತು ಜಿಮ್ನಲ್ಲಿ ಅಷ್ಟೇ ಶ್ರಮವಹಿಸಿತ್ತಾಳೆ. ತನ್ನ ಆಹಾರ ಕ್ರಮದ ಬಗ್ಗೆಯೂ ಪೂಜಾ ಕಟ್ಟುನಿಟ್ಟಾಗಿದ್ದಾಳೆ. ಜಿಮ್ ನಲ್ಲಿ ವರ್ಕ್ ಔಟ್ ಮಾಡುವಾಗ ಆಕೆ ತನ್ನ ರೂಟೀನ್ ತಪ್ಪದೆ ಪಾಲಿಸುತ್ತಾಳೆ. ಪೂಜಾ, ಸೋಶಿಯಲ್ ಮಿಡಿಯಾನಲ್ಲೂ ಸಕ್ರಿಯಳಾಗಿದ್ದು ತಾನು ಕಸರತ್ತು ಮಾಡುವ ಫೋಟೋಗಳನ್ನು ರೆಗ್ಯುಲರ್ ಆಗಿ ಪೋಸ್ಟ್ ಮಾಡುತ್ತಿರುತ್ತಾಳೆ. ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಬೇರೆಯವರ ವಿಷಯ ಹೇಗಾದರೂ ಇರಲಿ, ನಮ್ಮ ಕನ್ನಡದ ಹುಡುಗಿಯರು, ಐಶ್ವರ್ಯ ರೈ ಬಚ್ಚನ್, ಶಿಲ್ಪಾ, ಪೂಜಾ ಮೊದಲಾದವರೆಲ್ಲ ಫಿಟ್ನೆಸ್ ಕಾಯ್ದುಕೊಳ್ಳಲು ಶ್ರಮಪಡೋದು ಖುಷಿಯ ವಿಷಯ ಮಾರಾಯ್ರೇ.

ಇದನ್ನೂ ಓದಿ:  ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​