ಚಂಕಿ ಪಾಂಡೆ ಕುವರಿ ಅನನ್ಯ ಹಿತಕರವೆನಿಸದ ಕಾರಣಗಳಿಗೆ ಸುದ್ದಿಯಲ್ಲಿರೋದು ಅಭಿಮಾನಿಗಳಿಗೆ ಬೇಸರದ ಸಂಗತಿ

2018ರಲ್ಲಿ ಬಿಡುಗಡೆಯಾದ ‘ಸ್ಟೂಡೆಂಟ್ ಆಫ್ ದಿ ಈಯರ್ 2’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿಯಾದ ಅನನ್ಯ ಆ ಚಿತ್ರದಲ್ಲಿ ನೀಡಿದ ಅಭಿನಯಕ್ಕೆ ಬೆಸ್ಟ್ ಡೆಬ್ಯು ಫಿಲಂಫೇರ್ ಪ್ರಶಸ್ತಿಯನ್ನೂ ಗಿಟ್ಟಿಸಿದರು.

ಮನಸೆಳೆಯುವ ಸೌಂದರ್ಯ, ಎತ್ತರದ ನಿಲುವು ಮತ್ತು ಪ್ರತಿಭೆಯೊಂದಿಗೆ ಮನೆಮಾತಾಗಿರುವ  ಅನನ್ಯ ಪಾಂಡೆ ಕಳೆದೆರಡು ವಾರಗಳಿಂದ ಬೇಡದ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ ಮಾರಾಯ್ರೇ. ಇದೇ ಶನಿವಾರದಂದು ತಮ್ಮ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಅನನ್ಯ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರ 25 ವರ್ಷ ವಯಸ್ಸಿನ ಮಗ ಆರ್ಯನ್ ಖಾನ್ ಜೊತೆ ನಡೆಸಿದ ವಾಟ್ಸ್ಯಾಪ್ ಚ್ಯಾಟ್​ನಿಂದಾಗಿ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅನನ್ಯ ಡ್ರಗ್ಸ್ ಸೇವಿಸಿರುವ ಬಗ್ಗೆ ಆರೋಪಗಳಿಲ್ಲದಿದ್ದರೂ ಆರ್ಯನ್ ಜೊತೆ ನಡೆಸಿದ ಚ್ಯಾಟ್​ನಲ್ಲಿ ಅವರಿಗೆ ಗಾಂಜಾದ ಏರ್ಪಾಟು ಮಾಡುವುದಾಗಿ ಹೇಳಿದ್ದಾರೆ. ಪಾಪದ ಹುಡುಗಿ ತಮ್ಮ ತಂದೆ ಚಂಕಿ ಪಾಂಡೆ ಜೊತೆ ಎನ್ ಸಿ ಬಿ ಕಚೇರಿಗೆ ಹ್ಯಾಪು ಮೋರೆ ಹಾಕಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಪಾಪ ಅನಿಸದಿರದು.

2018ರಲ್ಲಿ ಬಿಡುಗಡೆಯಾದ ‘ಸ್ಟೂಡೆಂಟ್ ಆಫ್ ದಿ ಈಯರ್ 2’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿಯಾದ ಅನನ್ಯ ಆ ಚಿತ್ರದಲ್ಲಿ ನೀಡಿದ ಅಭಿನಯಕ್ಕೆ ಬೆಸ್ಟ್ ಡೆಬ್ಯು ಫಿಲಂಫೇರ್ ಪ್ರಶಸ್ತಿಯನ್ನೂ ಗಿಟ್ಟಿಸಿದರು.

ಇದುವರೆಗೆ ಅವರು ಕೇವಲ 4-5 ಚಿತ್ರಗಳಲ್ಲಿ ನಟಿಸಿರುವರಾದರೂ ಜನಪ್ರಿಯತೆಯ ಚಾರ್ಟ್ನಲ್ಲಿ ಉತ್ತುಂಗವನ್ನು ತಲುಪಿದ್ದಾರೆ. ‘ಪತಿ ಪತ್ನಿ ಔರ್ ವೋ’ ಚಿತ್ರದಲ್ಲಿ ಅವರು ಮದುವೆಯಾಗಿರುವ ಪುರುಷನನ್ನು ಪ್ರೀತಿಸುವ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ.

ಅನನ್ಯ ಡ್ರೆಸ್ ಸೆನ್ಸ್ ಬಹಳ ಚೆನ್ನಾಗಿದೆ. ಮಾಡ್ ಉಡುಪುಗಳನ್ನೇ ಹೆಚ್ಚು ಇಷ್ಟಪಡುವ ಅವರು ಸಾಂಪ್ರದಾಯಿಕ ಉಡುಗೆಗಳಾದ ಚೂಡಿ, ಲೆಹೆಂಗಾ ಮತ್ತು ಸೀರೆಗಳಲ್ಲೂ ಸುಂದರವಾಗಿ ಕಾಣುತ್ತಾರೆ. ಹಾಗೆ ನೋಡಿದರೆ ಈ ಬೆಡಗಿ ಸೀರೆ ಉಟ್ಟಿರುವ ಸಂದರ್ಭಗಳು ಬಹಳ ಕಡಿಮೆ.

ಇದನ್ನೂ ಓದಿ:  Viral Video: ಸಾಂಪ್ರದಾಯಿಕ ಉಡುಗೆ ತೊಟ್ಟು ಸ್ಕೇಟಿಂಗ್​ನಲ್ಲೇ ರಾಜಸ್ಥಾನಿ ಜಾನಪದ ನೃತ್ಯ ಮಾಡಿದ ಯುವತಿ; ಇಲ್ಲಿದೆ ವಿಡಿಯೋ

Click on your DTH Provider to Add TV9 Kannada