ಭಾರತದಲ್ಲಿ ಮತ್ತೊಂದು ಏರ್ಕ್ರಾಫ್ಟ್ ರೆಸ್ಟುರಾಂಟ್ ಗುಜರಾತಿನ ವಡೋದರನಲ್ಲಿ ಸೋಮವಾರದಂದು ಅಸ್ತಿತ್ವಕ್ಕೆ ಬಂದಿದೆ
ಇಲ್ಲಿಗೆ ಊಟ ಇಲ್ಲವೇ ತಿಂಡಿ ತಿನ್ನಲು ಬರುವ ಜನ ವಿಮಾನವೊಂದರಲ್ಲಿ ಕುಳಿತ ಅನುಭವ ಪಡೆಯುತ್ತಾರಂತೆ. ಅದಕ್ಕೆ ಕಾರಣವೂ ಇದೆ. ಹೋಟೆಲ್ ಕೆಲಸ ಮಾಡುವ ಜನ ಗಗನಸಖಿ ಮತ್ತು ಸ್ಟಿವರ್ಡ್ ಗಳ ದಿರಿಸಿನಲ್ಲಿ ಪ್ರತ್ಯಕ್ಷರಾಗುತ್ತಾರೆ.
ಇಲ್ಲಿ ನಿಮಗೆ ಕಾಣುತ್ತಿರುವುದು ವಿಮಾನವೇ ಆದರೂ ಅದು ವಿಮಾನವಲ್ಲ! ಬೆಂಗಳೂರು ಮೂಲದ ಸಂಸ್ಥೆಯೊಂದು ಈ ಏರ್ಬಸ್ ಅನ್ನು ಖರೀದಿಸುವ ಮೊದಲು ಅದು ವಿಮಾನವೇ ಆಗಿತ್ತು. ಅದರೆ ಅದೀಗ ಗುಜರಾತಿನ ವಡೋದರ ನಗರದ ತರ್ಸಾಲಿ ಬೈಪಾಸ್ ಬಳಿ ಸ್ಥಾಪನೆಗೊಂಡಿರುವ ಒಂದು ಏರ್ಕ್ರಾಫ್ಟ್ ರೆಸ್ಟುರಾಂಟ್. ಹೋಟೆಲ್ ಸಾರ್ವಜನಿಕರಿಗೆ ತೆರೆದುಕೊಂಡಿದ್ದು ಕೇವಲ ಎರಡು ದಿನಗಳ ಹಿಂದೆ ಅಂದರೆ ಸೋಮವಾರದಂದು. ಗುಜರಿಗೆ ಹೋಗಲು ಅಣಿಯಾಗಿರುವ ವಿಮಾನವೊಂದನ್ನು ಹೋಟೆಲ್ ಆಗಿ ಪರಿವರ್ತಿಸಿದ ವಿಶ್ವದ 9ನೇ ಏರ್ಬಸ್ ಇದಾಗಿದೆ. ಭಾರತದಲ್ಲಿ ಅಂಥ 4 ನೇ ರೆಸ್ಟುರಾಂಟ್ ಇದು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಬೆಂಗಳೂರಿನ ಒಂದು ಸಂಸ್ಥೆ ಇದನ್ನು ರೂ. 1.40 ಕೋಟಿಗಳಿಗೆ ಖರೀದಿಸಿ ಹೋಟೆಲ್ ಆಗಿ ಪರಿವರ್ತಿಸಿದೆ.
ವಿಮಾನವನ್ನು ಅದು ನಿಂತಿದ್ದ ಸ್ಥಳದಲ್ಲೇ ಡಿಸ್ಮ್ಯಾಂಟಲ್ ಮಾಡಿ ಬಿಡಿ ಭಾಗಗಳನ್ನು ವಡೋದರಾಗೆ ತಂದು ರೆಸ್ಟುರಾಂಟ್ ಕಟ್ಟಲಾಗಿದೆ. ಈಗ ಅದರ ಬೆಲೆ ರೂ 2 ಕೋಟಿಯಾಗಿದೆಯಂತೆ. ಸದರಿ ಹೋಟೆಲ್ನಲ್ಲಿ ಒಂದು ಸಲಕ್ಕೆ 102 ಜನ ಕೂತು ಆಹಾರ ಸೇವಿಸಬಹುದು.
ಇಲ್ಲಿಗೆ ಊಟ ಇಲ್ಲವೇ ತಿಂಡಿ ತಿನ್ನಲು ಬರುವ ಜನ ವಿಮಾನವೊಂದರಲ್ಲಿ ಕುಳಿತ ಅನುಭವ ಪಡೆಯುತ್ತಾರಂತೆ. ಅದಕ್ಕೆ ಕಾರಣವೂ ಇದೆ. ಹೋಟೆಲ್ ಕೆಲಸ ಮಾಡುವ ಜನ ಗಗನಸಖಿ ಮತ್ತು ಸ್ಟಿವರ್ಡ್ ಗಳ ದಿರಿಸಿನಲ್ಲಿ ಪ್ರತ್ಯಕ್ಷರಾಗುತ್ತಾರೆ. ವಿಮಾನದಲ್ಲಿ ಕುಳಿತಂತೆ ಅನುಭವ ಆಗುವುದಕ್ಕೆ ಬೇರೆ ಕಾರಣವೂ ಇದೆ. ವಿಮಾನದಲ್ಲಿ ಅನೌನ್ಸ್ಮೆಂಟ್ ಗಳು ಆಗುವ ಹಾಗೆ ಇಲ್ಲೂ ಬಗೆಬಗೆಯ ಉದ್ಘೋಷಣೆಗಳು ಹೋಟೆಲ್ ನಲ್ಲಿ ಕುಳಿತ ಗ್ರಾಹಕರಿಗೆ ಕೇಳಿಸುತ್ತಿರುತ್ತವಂತೆ.
ಇಷ್ಟೆಲ್ಲ ಏರ್ಬಸ್ ರೆಸ್ಟುರಾಂಟ್ನಲ್ಲಿ ಇರಬೇಕಾದರೆ ಊಟಕ್ಕೆ ಏನೇನು ಸಿಗುತ್ತದೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಹೌದು ತಾನೇ? ಓಕೆ, ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಇಲ್ಲಿ ನೀವು ಬಯಸುವ ಊಟ ಸಿಗುತ್ತದೆ, ಚೈನೀಸ್, ಪಂಜಾಬಿ, ಕಾಂಟಿನೆಂಟಲ್, ಇಟಾಲಿಯನ್, ಮೆಕ್ಸಿಕನ್, ಥಾಯಿ ಮೊದಲಾದ ವೆರೈಟಿ ಊಟ ಸಿಗುತ್ತದೆ.
ಇದನ್ನೂ ಓದಿ: ‘ಅಪ್ಪ-ಅಮ್ಮನ ವೆಡ್ಡಿಂಗ್ ಆ್ಯನಿವರ್ಸರಿಗೆ ವಿಶ್ ಮಾಡ್ಬೇಕು, ವಿಡಿಯೋ ಕಾಲ್ ಮಾಡಿಕೊಡಿ ಪ್ಲೀಸ್’; ಆರ್ಯನ್ ಅಳಲು?