ಭಾರತದಲ್ಲಿ ಟ್ಯಾಬ್ಲೆಟ್ ಪೋರ್ಟ್ಫೋಲಿಯೋ ಹೆಚ್ಚಿಸಿಕೊಳ್ಳುತ್ತಿರುವ ಲೆನೊವೊ ಹೊಸ ಟ್ಯಾಬ್ ಕೆ10 ಲಾಂಚ್ ಮಾಡಿದೆ
ಟ್ಯಾಬ್ ಕೆ10ನ ಎರಡು ಮಾಡೆಲ್ ಗಳಿವೆ. ರೆಗ್ಯುಲರ್ ಮಾಡೆಲ್ ಜನಸಾಮಾನ್ಯರ ಬಳಕೆಗೆ ವಿನ್ಯಾಸಗೊಂಡಿದ್ದರೆ, ಇನ್ನೊಂದು ಮಾಡೆಲ್ ಬ್ಯಾಟರಿರಹಿತವಾಗಿದೆ.
ಲೆನೊವೊ ಸಂಸ್ಥೆಯು ಭಾರತದಲ್ಲಿ ತನ್ನ ಟ್ಯಾಬ್ಲೆಟ್ ಪೋರ್ಟ್ಫೋಲಿಯೋವನ್ನು ಹೆಚ್ಚಿಸಿಕೊಳ್ಳುತ್ತಿದೆ. ಕೆಲ ಪ್ರೀಮಿಯಂ ಫೀಚರ್ ಗಳೊಂದಿಗೆ ಈ ವರ್ಷದ ಆರಂಭದಲ್ಲಿ ಟ್ಯಾಬ್ ಪಿ11 ಪ್ರೋ ಅನ್ನು ಪರಿಚಯಿಸಿದ ನಂತರ ಕಂಪನಿಯು ಈಗ ಹೊಚ್ಚ ಹೊಸ ಟ್ಯಾಬ್ ಕೆ10 ಲಾಂಚ್ ಮಾಡುವ ಮೂಲಕ ಎಲ್ಲ ಸಮುದಾಯಗಳಿಗೆ ಹತ್ತಿರವಾಗುತ್ತಿದೆ. ಈ ಟ್ಯಾಬ್ ಮಿಡಿಯಾಟೆಕ್ ಹೆಲಿಯೋ ಪಿ22ಟಿ ನಂಥ ಹಾರ್ಡ್ವೇರ್ ನೊಂದಿಗೆ ಬರಲಿದೆ. ಇದು ಕ್ಷಿಪ್ರಗತಿಯಲ್ಲಿ ಕಾರ್ಯಶೀಲಗೊಳ್ಳುವುದಿಲ್ಲ ನಿಜ ಅದರೆ ಸಾಮಾನ್ಯವೆನಿಸುವ ಆಪ್ ಮತ್ತು ಗೇಮ್ಗಳಿಗೆ ಸಾಕಾಗುತ್ತದೆ. ಕಂಪನಿ ಮೂಲಗಳ ಪ್ರಕಾರ ಹೊಸ ಟ್ಯಾಬ್ಲೆಟ್ ಸ್ಟೈಲಸ್ ಒಂದನ್ನು ಸಹ ಸಪೋರ್ಟ್ ಮಾಡುತ್ತದೆ, ಆದರೆ ಈ ಆಕ್ಸೆಸರಿಯು ಆಪ್ಷನಲ್ ಆಗಿದೆ.
ಟ್ಯಾಬ್ ಕೆ10ನ ಎರಡು ಮಾಡೆಲ್ ಗಳಿವೆ. ರೆಗ್ಯುಲರ್ ಮಾಡೆಲ್ ಜನಸಾಮಾನ್ಯರ ಬಳಕೆಗೆ ವಿನ್ಯಾಸಗೊಂಡಿದ್ದರೆ, ಇನ್ನೊಂದು ಮಾಡೆಲ್ ಬ್ಯಾಟರಿರಹಿತವಾಗಿದೆ. ಇದು ವ್ಯಾಪಾರಿಗಳಿಗೆ, ರಿಟೇಲ್ ವ್ಯವಹಾರದಲ್ಲಿರುವವರಿಗೆ, ಉತ್ಪದಕಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ, ಬ್ಯಾಂಕಿಂಗ್, ಫಿನಾನ್ಸ್, ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿರುವವರಿಗೆ ಉಪಯೋಗವಾಗಲಿದೆ. ಇದು ಪ್ರಾಯಶಃ ನೇರ ವಿದ್ಯುತ್ ಪೂರೈಕೆಯ ಮೂಲಕ ಕಾರ್ಯಶೀಲಗೊಳ್ಳುತ್ತದೆ.
ಅಂದಹಾಗೆ, ಲೆನೊವೊ ಟ್ಯಾಬ್ ಕೆ 10 ಬೆಲೆಯನ್ನು ಸಹ ತಿಳಿದುಕೊಂಡು ಬಿಡೋಣ. ಮೂಲಗಳ ಪ್ರಕಾರ ಇದರ ಆರಂಭಿಕ ಬೆಲೆ ರೂ. 25,000 ಅಗಿದೆ. ಅದರೆ, ಕಂಪನಿಯ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಪರಿಶೀಲಿಸಿದ್ದೇಯಾದರೆ ಲೆನೊವೊ ಟ್ಯಾಬ್ ಕೆ10 ಬೆಲೆಯನ್ನು ರೂ. 13,999 ಅಂತ ನಮೂದಿಸಲಾಗಿದೆ.
ನೀವು ವೈ-ಫೈ ಮಾತ್ರ ಆಯ್ಕೆ ಮಾಡಿಕೊಂಡರೆ ಇದು 3ಜಿಬಿ ರ‍್ಯಾಮ್, 32 ಜಿಬಿ ಸ್ಟೋರೇಜ್ ಮಾದರಿಯ ಬೆಲೆಯಾಗಿದೆ. ಅದೇ ಸ್ಟೋರೇಜ್ನೊಂದಿಗೆ ವೈ-ಫೈ + ಸ್ಥಳೀಯ ತೆರಿಗೆಗಳ ಪ್ರತ್ಯೇಕ ಆವೃತ್ತಿ ಲಭ್ಯವಿದೆಯಾದರೂ ಸದ್ಯಕ್ಕೆ ಅವುಗಳ ಸ್ಟಾಕ್ ಇಲ್ಲ. 64 ಜಿಬಿ ಸ್ಟೋರೇಜ್ ವೈ-ಫೈ ಮಾತ್ರ ಇರುವ ಅವೃತ್ತಿಯ ಬೆಲೆ 15,999 ರೂ. ಆದರೆ ವೈ-ಫೈ + ಎಲ್ ಟಿಇ ಆವೃತ್ತಿಯ ಬೆಲೆ ರೂ. 16,999. ರೂ 2,333 ರಿಂದ ಪ್ರಾರಂಭವಾಗುವ ಯಾವುದೇ ಹೆಚ್ಚುವರಿ ವೆಚ್ಚವಿರದ ಈ ಎಮ್ ಐ ಪಾವತಿ ಸೌಲಭ್ಯವನ್ನು ಸಹ ಪಡೆಯಬಹುದು. ಲೆನೊವೊ ಟ್ಯಾಬ್ K10 ಕೇವಲ ಅಬಿಸ್ ಬ್ಲೂ ಬಣ್ಣದಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ: Viral Video: ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್