ಮೈಸೂರಿನಲ್ಲಿ ಮುಂದುವರಿದ ವರುಣನ ರುದ್ರ ನರ್ತನ, ತಾಂಡವಪುರದ ಕೋಳಿಫಾರ್ಮ್ ದ್ವೀಪವಾಗಿ ಮಾರ್ಪಟ್ಟಿದೆ!

ಮೈಸೂರಿನಲ್ಲಿ ಮುಂದುವರಿದ ವರುಣನ ರುದ್ರ ನರ್ತನ, ತಾಂಡವಪುರದ ಕೋಳಿಫಾರ್ಮ್ ದ್ವೀಪವಾಗಿ ಮಾರ್ಪಟ್ಟಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2021 | 8:10 PM

ನಮ್ಮ ದೇಶದ ರೈತರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಜನ ಮಳೆಯಾಧಾರಿತ ಬೇಸಾಯ ಮಾಡಿಕೊಂಡಿದ್ದಾರೆ. ಮಳೆ ಬಾರದೆ ಹೋದರೂ ಕಷ್ಟ ಜಾಸ್ತಿ ಸುರಿದರೂ ಸಮಸ್ಯೆ. ಪ್ರತಿವರ್ಷ ಅವರು ಗೋಳಾಡುವಂತಾಗಿದೆ.

ಮಳೆಗಾಲ ಕೊನೆಗೊಂಡು ಒಂದು ತಿಂಗಳಾದರೂ ಮಳೆರಾಯ ತನ್ನ ಪ್ರವರ ನಿಲ್ಲುತ್ತಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರು, ಕರಾವಳಿ ಪ್ರದೇಶ, ಸಾಂಸ್ಕೃತಿಕ ನಗರ ಮೈಸೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಅತಿವೃಷ್ಟಿಯಿಂದಾಗಿ ನಾಡಿನ ರೈತರ ಬದುಕು ಕಂಗಲಾಗಿದೆ. ಒಂದೆಡೆ ಮಳೆಯ ಹೊಡೆತಕ್ಕೆ ಸಿಕ್ಕು ಬೆಳೆದು ನಿಂತ ಪೈರು ನೆಲಕಚ್ಚಿದ್ದರೆ, ಮತ್ತೊಂದೆಡೆ ದ್ವೀಪದಂತಾಗಿರುವ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಹೇಗೆ ಮಾಡುವುದು ಅಂತ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಬಿಸಿಲುನಾಡುಗಳು ಅಂತ ಅನಿಸಿಕೊಂಡಿರುವ ಯಾದಗಿರಿ, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಹ ಜೋರು ಮಳೆಯಾಗುತ್ತಿದೆ.

ಇಲ್ಲಿರುವ ವಿಡಿಯೋ ನೋಡಿ. ಆಗಲೇ ಹೇಳಿದಂತೆ ಮೈಸೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ವಿಡಿಯೋನಲ್ಲಿ ನಿಮಗೆ ಕಾಣಿತ್ತಿರೋದು ನಂಜನಗೂಡು ತಾಲ್ಲೂಕಿನ ತಾಂಡವಪುರ ಹೆಸರಿನ ಗ್ರಾಮದಲ್ಲಿರುವ ಒಂದು ಕೋಳಿ ಫಾರಂ ಮತ್ತು ಫಾರ್ಮ್ ಹೌಸ್. ಮಳೆ ಸೃಷ್ಟಿಸಿರುವ ಅವಾಂತರ ನೋಡಿ. ಇಡೀ ಪ್ರದೇಶ ಒಂದು ದ್ವೀಪದಂತೆ ಭಾಸವಾಗುತ್ತಿದೆ.

ಆಗಲೇ ಹೇಳಿದ ಹಾಗೆ, ನಮ್ಮ ದೇಶದ ರೈತರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಜನ ಮಳೆಯಾಧಾರಿತ ಬೇಸಾಯ ಮಾಡಿಕೊಂಡಿದ್ದಾರೆ. ಮಳೆ ಬಾರದೆ ಹೋದರೂ ಕಷ್ಟ ಜಾಸ್ತಿ ಸುರಿದರೂ ಸಮಸ್ಯೆ. ಪ್ರತಿವರ್ಷ ಅವರು ಗೋಳಾಡುವಂತಾಗಿದೆ.

ಬೇಸಾಯದ ಸಹವಾಸವೇ ಬೇಡ ಅಂತ ಉತ್ತರ ಕರ್ನಾಟಕದ ಆನೇಕ ರೈತರು ಬೆಂಗಳೂರಿಗೆ ಗುಳೆ ಎದ್ದು ಬರಲಾರಂಭಿಸಿ ಮೂರು ದಶಕಗಳು ಕಳೆದಿವೆ. ಮುಂಬೈಯಲ್ಲಿ 1993 ರಲ್ಲಿ ಉಗ್ರರು ನಡೆಸಿದ ಸರಣಿ ಸ್ಫೋಟಕ್ಕಿಂತ ಮೊದಲು ಜನ ಅಲ್ಲಿಗೆ ವಲಸೆ ಹೋಗುತ್ತಿದ್ದರು.

ಇದನ್ನೂ ಓದಿ:  ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಮುಸ್ಲಿಂ ಸಮುದಾಯದ ವ್ಯಕ್ತಿ, ವಿಡಿಯೋ ವೈರಲ್