ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಮುಸ್ಲಿಂ ಸಮುದಾಯದ ವ್ಯಕ್ತಿ, ವಿಡಿಯೋ ವೈರಲ್
ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲಾ ಸೇರಿಕೊಂಡು ಇದ್ದೀವಿ. ನೀವು ಬಂದ ಮೇಲೆ ನಮ್ಮ ದೇಶ ನಾಶವಾಗುತ್ತಿದೆ. ಟಿಪ್ಪು ಅಂದರೇ ಹುಲಿ. ಒಳ್ಳೆ ಕೆಲಸ ಮಾಡೋರಿಗೆ ಬಿಡಿ ಅಂತ ವ್ಯಕ್ತಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ
ತುಮಕೂರು: ಭಜರಂಗದಳ (Bajrang Dal) ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಶುಕ್ರವಾರ ತುಮಕೂರು ಬಂದ್ ಆಗಿತ್ತು. ಬಂದ್ಗೆ ಮುಸ್ಲಿಂ ಸಮುದಾಯದ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಮೂಲದ ವ್ಯಕ್ತಿ ಏಜಾಸ್ ರಾವಲ್ ಎಂಬುವವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪ್ರತಿಭಟನೆ ಮಾಡೋದು ಬಿಟ್ಟು ನಿಮಗೆ ಕೆಲಸವಿಲ್ಲವಾ. ಯಾಕ್ರೋ ಹಿಂದು ಮುಸ್ಲಿಂ ಅಂತಾ ಓಡಾಡುತ್ತಿದ್ದೀರಾ. ಯಾಕೆ ವಾತಾವರಣ ಹಾಳು ಮಾಡುತ್ತೀರಾ ಅಂತ ವೈರಲ್ ಆದ ವಿಡಿಯೋದಲ್ಲಿ ಕೇಳಿದ್ದಾರೆ.
ನಮ್ಮ ಭಾರತ ದೇಶದಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲಾ ಸೇರಿಕೊಂಡು ಇದ್ದೀವಿ. ನೀವು ಬಂದ ಮೇಲೆ ನಮ್ಮ ದೇಶ ನಾಶವಾಗುತ್ತಿದೆ. ಟಿಪ್ಪು ಅಂದರೇ ಹುಲಿ. ಒಳ್ಳೆ ಕೆಲಸ ಮಾಡೋರಿಗೆ ಬಿಡಿ ಅಂತ ವ್ಯಕ್ತಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಯಾಕೆ ನಮ್ಮನ್ನ ನೀವು ಟಾರ್ಗೆಟ್ ಮಾಡುತ್ತಿದ್ದೀರಾ? ನೀವು ಲವ್ ಜಿಹಾದ್ ಮಾಡುತ್ತೀರಾ. ನಮ್ಮ ಮುಸ್ಲಿಂ ಹುಡುಗಿಯರ ಬಗ್ಗೆ ಆಗಲಿ, ನಮ್ಮ ಬಗ್ಗೆ ಆಗಲಿ ಅಪ್ಪಿತಪ್ಪಿ ಮಾತನಾಡಿದರೆ ಹುಷಾರ್. ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಅಂತ ಭಜರಂಗದಳ, ಹಿಂದೂಪರ ಸಂಘಟನೆಗಳ ವಿರುದ್ಧ ಮುಸ್ಲಿಂ ಸಮುದಾಯದ ವ್ಯಕ್ತಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ
ಭಜರಂಗದಳ ಜಿಲ್ಲಾ ಸಂಚಾಲಕನ ಮೇಲೆ ಹಲ್ಲೆ: ಹಿಂದೂಪರ ಸಂಘಟನೆಗಳಿಂದ ಅ.22 ರಂದು ತುಮಕೂರು ಬಂದ್ಗೆ ಕರೆ
ಸ್ಮಾರ್ಟ್ ಸಿಟಿ ಯೋಜನೆ ಹುಬ್ಬಳ್ಳಿಗಷ್ಟೇ ಸೀಮಿತ ಆರೋಪ; ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನಿರ್ಮಿಸಲು ಆಗ್ರಹ
Published On - 10:28 am, Mon, 25 October 21