ಕೊಡಗಿನಲ್ಲಿ ಬಿಳಿ ಗೂಬೆ ಹಿಡಿದು ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಅರೋಪಿಗಳು ಕೇರಳದ ಕಾಸರಗೋಡಿನವರು
ಬಿಳಿ ಗೂಬೆಗಳು ಶುಭಶಕುನವೆಂದು ಭಾವಿಸಲಾಗುತ್ತದೆ. ಹಾಗಾಗಿ ಬಿಳಿ ಗೂಬೆಗಳಿಗೆ ಭಯಂಕರ ಡಿಮ್ಯಾಂಡ್ ಮಾರಾಯ್ರೇ. ಕೆಲವರು ಒಂದೊಂದು ಗೂಬೆಗೆ 3-4 ಲಕ್ಷ ರೂ ಕೊಡಲು ರೆಡಿಯಿರುತ್ತಾರಂತೆ.
Kodagu: ಗೂಬೆ ಅಂದರೆ ಅನಿಷ್ಟ, ಅಪಶಕುನ ಅತ ಹೇಳುತ್ತಾರೆ. ಅದನ್ನು ನೀವು ಸಹ ಕೇಳಿಸಿಕೊಂಡಿರಬಹುದು. ಅದರೆ ನಿಮಗೊಂದು ವಿಷಯ ಗೊತ್ತಾ? ಬಿಳಿ ಗೂಬೆಗಳು (white owls) ಶುಭಶಕುನವೆಂದು (good omen) ಭಾವಿಸಲಾಗುತ್ತದೆ. ಹಾಗಾಗಿ ಬಿಳಿ ಗೂಬೆಗಳಿಗೆ ಭಯಂಕರ ಡಿಮ್ಯಾಂಡ್ ಮಾರಾಯ್ರೇ. ಕೆಲವರು ಒಂದೊಂದು ಗೂಬೆಗೆ 3-4 ಲಕ್ಷ ರೂ ಕೊಡಲು ರೆಡಿಯಿರುತ್ತಾರಂತೆ! ಕೊಡಗಿನ (Kodagu) ವಿರಾಜಪೇಟೆಯಲ್ಲಿ ಚಿಕ್ಕಪೇಟೆಯಲ್ಲಿ ಹಣದಾಸೆಗಾಗಿ ಬಿಳಿ ಗೂಬೆಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ ಮೊಹಮ್ಮದ್, ಸತ್ತಾರ್ ಹಾಗೂ ಶೇಖಬ್ಬ ಎನ್ನುವವರನ್ನು ಸಿಐಡಿ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಮ ಜಂಟ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇವರು ಕೇರಳದ ಕಾಸರಗೋಡಿನವರಂತೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.