ಸಿಗ್ನಲ್ ಜಂಪ್ ಮಾಡಿ ಬಿಎಂಟಿಸಿ ಬಸ್ ಅಡಿ ಬೀಳಲಿದ್ದ ಬೈಕ್ ಸವಾರ ಜಸ್ಟ್ ಮಿಸ್: ವಿಡಿಯೋ ವೈರಲ್
ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡಿದ್ದು, ವೇಗವಾಗಿ ಬಂದ ಬಿಎಂಟಿಸಿ ಬಸ್ ಅಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ನವೆಂಬರ್ 4 ರಂದು ಮಧ್ಯಾಹ್ನ ಬೆಂಗಳೂರಿನ ದೇವೇಗೌಡ ಪೆಟ್ರೊಲ್ ಬಂಕ್ ಜಂಕ್ಷನ್ನಲ್ಲಿ ನಡೆದಿದೆ. ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು, ನವೆಂಬರ್ 6: ಸಿಗ್ನಲ್ ಜಂಪ್ ಮಾಡಿ ಬಂದ ಬೈಕ್ ಸವಾರ ಬಿಎಂಟಿಸಿ ಬಸ್ ಅಡಿ ಬೀಳುವುದರಲ್ಲಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರಿನ ದೇವೇಗೌಡ ಪೆಟ್ರೊಲ್ ಬಂಕ್ ಜಂಕ್ಷನ್ನಲ್ಲಿ ನಡೆದಿದೆ. ಸಿಗ್ನಲ್ ಜಂಪ್ ಮಾಡಿ ಬಂದ ಬೈಕ್ ಸವಾರ ಎದುರು ನಿಂತಿದ್ದ ಕಾರಿಗೆ ಗುದ್ದಿ ಪರಾರಿಯಾಗಿದ್ದಾನೆ. ಬನಶಂಕರಿ ಕಡೆಯಿಂದ ಬಂದ ಬೈಕ್ ಸವಾರ ಕಾಮಾಕ್ಯ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಅಡಿ ಬೀಳುವುದರಿಂದ ಜಸ್ಟ್ ಮಿಸ್ ಆಗಿದ್ದಾನೆ. ನವೆಂಬರ್ 4 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Published on: Nov 06, 2025 11:37 AM