ರಂಗನಾಥಸ್ವಾಮಿ ದರ್ಶನ ಮುಗಿಸಿ ಒಂದೇ ಕಾರಿನಲ್ಲಿ ಹೊರಟ ಸಿಎಂ ಮತ್ತು ಮಾಜಿ ಸಿಎಂ

Edited By:

Updated on: Dec 11, 2021 | 2:19 PM

ಕಾರಿನ ಮುಂಭಾಗದ ಸೀಟ್​ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಿಂಬದಿ ಸೀಟ್​ನಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಚಿಕ್ಕಪೇಟೆ ಬಳಿಯ ಬಳ್ಳಾಪುರ ಪೇಟೆಯ ರಂಗನಾಥಸ್ವಾಮಿ ದೇಗುಲದಿಂದ ತೆರಳಿದ್ದಾರೆ.

ಬೆಂಗಳೂರು: ರಂಗನಾಥಸ್ವಾಮಿ ದರ್ಶನ ಮುಗಿಸಿದ ಬಳಿಕ ಒಂದೇ ಕಾರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ್ದಾರೆ. ಕಾರಿನ ಮುಂಭಾಗದ ಸೀಟ್​ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಿಂಬದಿ ಸೀಟ್​ನಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಚಿಕ್ಕಪೇಟೆ ಬಳಿಯ ಬಳ್ಳಾಪುರ ಪೇಟೆಯ ರಂಗನಾಥಸ್ವಾಮಿ ದೇಗುಲದಿಂದ ತೆರಳಿದ್ದಾರೆ.

ರಂಗನಾಥಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಂಗನಾಥಸ್ವಾಮಿ ದೇಗುಲ 1,200 ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ. ಬಂಡೆಗಳಲ್ಲೇ ನಿರ್ಮಾಣವಾಗಿರುವ ವಿಶೇಷ ದೇವಸ್ಥಾನ ಇದಾಗಿದ್ದು, ದೇವಾಲಯ ನವೀಕರಣದ ಹಿನ್ನೆಲೆ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ.

ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ರಂಗನಾಥಸ್ವಾಮಿ ದೇಗುಲವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ದೇಗುಲದ ಗರ್ಭ ಗುಡಿಯ ದ್ವಾರ ಬೆಳ್ಳಿ ಬಾಗಿಲಿಗೆ 1.25 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಗರುಡಕಂಬಕ್ಕೆ ಸುಮಾರು 45 ಲಕ್ಷ ರೂ. ಖರ್ಚು ಮಾಡಲಾಗಿದೆ. ದಾನಿಗಳ ಸಹಾಯದಿಂದ ದೇಗುಲದ ನವೀಕರಣ ಕಾರ್ಯ ನಡೆದಿದೆ.

ಇದನ್ನೂ ಓದಿ:
ಶಬರಿಮಲೆ ದೇಗುಲಕ್ಕೆ ಹೋಗುವ ಅಯ್ಯಪ್ಪಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ನೀಡಿದ ಕೇರಳ ಸರ್ಕಾರ

ರಂಗನಾಥಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ

Loading...
Unable to load recommendations.
Follow Us
TV9 Web

TV9 Kannada

Read More