ತುರ್ತಾಗಿ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿಗಳಿಗೂ ಅನುಭವವಾಯಿತು ಟ್ರಾಫಿಕ್ ಜಾಮ್ ಪೇಚಾಟ

ತುರ್ತಾಗಿ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿಗಳಿಗೂ ಅನುಭವವಾಯಿತು ಟ್ರಾಫಿಕ್ ಜಾಮ್ ಪೇಚಾಟ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 12:04 PM

ಶನಿವಾರ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಅಧಿಕೃತ ನಿವಾಸದ ಮುಂಭಾಗದಲ್ಲೇ ಟ್ರಾಫಿಕ್ ಜಾಮ್ನ ಬಿಸಿ ತಟ್ಟಿತು

ಬೆಂಗಳೂರು: ಮುಖ್ಯಮಂತ್ರಿಗಳು ಇಲ್ಲವೇ ಸಚಿವರು ರಸ್ತೆಯಲ್ಲಿ ಹೋಗುವಾಗ ಅವರಿಗೆ ಸುಗಮ ಸಂಚಾರ ಕಲ್ಪಿಸಲು ಟ್ರಾಫಿಕ್ ಪೊಲೀಸರು ಪ್ರಮುಖ ಸರ್ಕಲ್ ಗಳಲ್ಲಿ ಗಣ್ಯರು ತಮ್ಮ ಕಾನ್ವಾಯ್ (convoy) ನೊಂದಿಗೆ ಬರುತ್ತಿರುವ ರಸ್ತೆಯೊಂದನ್ನು ಬಿಟ್ಟು ಉಳಿದ ರಸ್ತೆಗಳಲ್ಲಿನ ಸಂಚರಿಸುವ ವಾಹನಗಳನ್ನು ಬ್ಲಾಕ್ ಮಾಡುತ್ತಾರೆ. ಈ ವಿಐಪಿ ಸಂಸ್ಕೃತಿ ತೊಲಗಬೇಕೆಂದು ನಾವೆಲ್ಲ ಅಡುವ ಮಾತು ಬರೀ ಮಾತಾಗಿಯೇ ಉಳಿದುಬಿಟ್ಟಿದೆ. ಶನಿವಾರ ಸಭೆಯೊಂದರಲ್ಲಿ ಭಾಗವಹಿಸಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ತಮ್ಮ ಅಧಿಕೃತ ನಿವಾಸದ ಮುಂಭಾಗದಲ್ಲೇ ಟ್ರಾಫಿಕ್ ಜಾಮ್ನ (traffic jam) ಬಿಸಿ ತಟ್ಟಿತು. ಆದರೂ ಟ್ರಾಫಿಕ್ ಪೊಲೀಸರು ಮುಖ್ಯಮಂತ್ರಿಗಳಿಗೆ ‘ರಾಜಮಾರ್ಗ’ ನಿರ್ಮಿಸಿ ಅವರ ಕಾನ್ವಾಯ್ ಸಾಗಿ ಹೋಗಲು ಏರ್ಪಾಟು ಮಾಡಿಕೊಟ್ಟರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ