ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಮೇಘ ಸ್ಫೋಟದಿಂದ ಹಲವು ಯಾತ್ರಿಕರು ಕೊಚ್ಚಿ ಹೋಗಿದ್ದಾರೆ. ಕರ್ನಾಟಕದ ಯಾತ್ರಿಕರ ಸಂಪರ್ಕಿಸಲು ರಾಜ್ಯ ಸರ್ಕಾರ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ. 080-1070, 22340676 ಸಂಖ್ಯೆಗೆ ಫೋನ್ ಮಾಡಬಹುದು.
ಬೆಂಗಳೂರು: ಜಮ್ಮು-ಕಾಶ್ಮೀರದ ಅಮರನಾಥ ಗುಹೆ (Amarnath shrine) ಬಳಿ ಮೇಘಸ್ಫೋಟ ಹಿನ್ನೆಲೆ ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯವಾಗಿ ಪ್ರತಿವರ್ಷ ಕನ್ನಡಿಗರು ಯಾತ್ರೆಗೆ ಹೋಗುತ್ತಾರೆ. ರಾಜ್ಯದ ನೂರಕ್ಕೂ ಹೆಚ್ಚು ಜನರು ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ಹೋದ ಬಹುತೇಕ ಎಲ್ಲರೂ ಸುರಕ್ಷಿತವಾಗಿದ್ದಾರೆ. ಬೇರೆ ಯಾವುದೇ ರೀತಿ ಅಹಿತಕರ ಘಟನೆಗಳ ಸುದ್ದಿ ಇಲ್ಲ. ರಾಜ್ಯ ಸರ್ಕಾರದಿಂದ ಹೆಲ್ಪ್‌ಲೈನ್ ಆರಂಭಿಸಲಾಗಿದೆ. ಹೆಲ್ಪ್ಲೈನ್ಗೆ 15-20 ಜನ ಈಗಾಗಲೇ ಕರೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರದ ಜತೆ ಸಂಪರ್ಕ ಹೊಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಇನ್ನೂ ರಾಜ್ಯದ ಹಲವೆಡೆ ಭಾರೀ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಪ್ರತಿಕ್ರಿಯಿಸಿದ್ದು, ಮಳೆ ಹಾನಿ ಬಗ್ಗೆ ನಿನ್ನೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ರಾಜ್ಯದ ಕೆಲವು ಭಾಗಗಳಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವೆಡೆ 2-3 ದಿನ ಮಳೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಮೈಸೂರಿನ ಆರು ಪ್ರವಾಸಿಗರು ಸೇಫ್
ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ:
ಮೇಘ ಸ್ಫೋಟದಿಂದ ಹಲವು ಯಾತ್ರಿಕರು ಕೊಚ್ಚಿ ಹೋಗಿದ್ದಾರೆ. ಕರ್ನಾಟಕದ ಯಾತ್ರಿಕರ ಸಂಪರ್ಕಿಸಲು ರಾಜ್ಯ ಸರ್ಕಾರ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ. 080-1070, 22340676 ಸಂಖ್ಯೆಗೆ ಫೋನ್ ಮಾಡಬಹುದು. Email: revenuedmkar@gmail.comಗೆ ಸಂಪರ್ಕಿಸಬಹುದಾಗಿದೆ. ಕಾಶ್ಮೀರ ವಿಭಾಗದ ಹೆಲ್ಪ್‌ಲೈನ್ ಸಂಖ್ಯೆ-0194-2496240 ಅಮರನಾಥ ದೇಗುಲದ ಹೆಲ್ಪ್‌ಲೈನ್ ಸಂಖ್ಯೆ-0194-2313149 ಎನ್‌ಡಿಆರ್‌ಎಫ್-011-23438252, 011-23438253.
ಅಮರನಾಥ್ ಪ್ರವಾಸಕ್ಕೆ ಹೋದ ಕರ್ನಾಟಕ ಪ್ರವಾಸಿಗರು ಸೇಫ್:
ಮೇಘಸ್ಫೋಟದಲ್ಲಿ ಮೈಸೂರು ಪ್ರವಾಸಿಗರು ಸಿಲುಕಿದ್ದು ಸದ್ಯ ಸೇಫ್ ಆಗಿದ್ದಾರೆ. ಕಿರಣ್, ಪ್ರಸಾದ್, ವಿಠ್ಠಲ್ ರಾಜ್ ಸೇರಿದಂತೆ 6 ಜನ ಸುರಕ್ಷಿತವಾಗಿದ್ದಾರೆ. ಜೂ.2ರಂದು ಅಮರನಾಥ್ ಪ್ರವಾಸಕ್ಕೆ ಮೈಸೂರಿನ ಪ್ರವಾಸಿಗರು ತೆರಳಿದ್ದು, ಘಟನೆ ವೇಳೆ ಶೇಷನಾಗ್ ಬಳಿ ಇದ್ದರು. ಮೇಘ ಸ್ಫೋಟದಿಂದಾಗಿ ನದಿಯ ಪ್ರವಾಹದಿಂದಾಗಿ ಟೆಂಟ್ಗಳು ಕೊಚ್ಚಿ ಹೋಗಿದ್ದು, ತಕ್ಷಣ ಆರಂಭವಾದ ರಕ್ಷಣಾ ಕಾರ್ಯಚರಣೆಯಿಂದಾಗಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಮೇಘ ಸ್ಫೋಟದ ದೃಶ್ಯಗಳು ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಮೈಸೂರಿಗೆ ವಾಪಸ್ಸಾಗಲು ಪ್ರವಾಸಿಗರು ಸಿದ್ದತೆ ನಡೆಸಿದ್ದು, ಸೇನಾ ಕ್ಯಾಂಪ್ನಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ.