AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಭ್ರಷ್ಟಾಚಾರ ಬಯಲು; ಟ್ವಿಟರ್​ನಲ್ಲಿ ಚಾಟಿ ಬೀಸಿದ ರಾಜ್ಯ ಬಿಜೆಪಿ

ಸಿದ್ದರಾಮಯ್ಯ ಸ್ಮೃತಿಗೆ ಗರ ಬಡಿದಿದೆಯೇ ಎಂದು ಟ್ವೀಟ್ ಮಾಡಿದೆ. 2014ರ ಮಾ.22ರಂದು ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಿತ್ತು.

ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಭ್ರಷ್ಟಾಚಾರ ಬಯಲು; ಟ್ವಿಟರ್​ನಲ್ಲಿ ಚಾಟಿ ಬೀಸಿದ ರಾಜ್ಯ ಬಿಜೆಪಿ
ಬಿಜೆಪಿ
Follow us
TV9 Web
| Updated By: sandhya thejappa

Updated on:Jul 09, 2022 | 11:59 AM

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯ ಬಿಜೆಪಿ (Karnataka BJP) ಕಿಡಿಕಾರಿದ್ದು, ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಅರ್ಕಾವತಿ, ಕೆಪಿಎಸ್ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣ ರಾರಾಜಿಸಿದ್ದವು. ಕಾಂಗ್ರೆಸ್ ವಿರುದ್ಧ ಅಂದೇ ರಾಜ್ಯ ಬಿಜೆಪಿ ಘಟಕ ಧ್ವನಿ ಎತ್ತಿತ್ತು. ಸಿದ್ದರಾಮಯ್ಯ ಸ್ಮೃತಿಗೆ ಗರ ಬಡಿದಿದೆಯೇ ಎಂದು ಟ್ವೀಟ್ ಮಾಡಿದೆ. 2014ರ ಮಾ.22ರಂದು ಕೆಪಿಎಸ್​ಸಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಅಂದು ಸಂಜೆಯೇ ನೇಮಕಾತಿ ಹಿಂದಿನ ಕರ್ಮಕಾಂಡದ ಬಂಡವಾಳ ಹೊರಬಿತ್ತು. ಆ ಅಕ್ರಮದಲ್ಲಿ 7 ಮಂದಿಯಷ್ಟೇ ಭಾಗಿ ಎಂದು ತೇಪೆ ಹಚ್ಚಿದ್ರು. ಅದರ ಬೆನ್ನಲ್ಲೇ 362 ಹುದ್ದೆಗಳ ನೇಮಕ ರದ್ದುಗೊಳಿಸಲಿಲ್ಲವೇ? ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್​ಗೆ ಪ್ರಶ್ನಿಸಿದೆ.

ಸಿದ್ದರಾಮಯ್ಯರು ಲೋಕಾಯುಕ್ತ ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗಲ್ಲ ಕರಪ್ಟ್​​ ಕಾಂಗ್ರೆಸ್​ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟರ್​ನಲ್ಲಿ ಕಿಡಿಕಾರಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ, ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್‍ ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಎಂದು ಪ್ರಶ್ನಿಸಿದ ಬಿಜೆಪಿ, ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ? ಎಂದು ಕೇಳಿದೆ.

Published On - 11:55 am, Sat, 9 July 22