AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಬಲ ಘೋಷಿಸುವ ಮೂಲಕ ನವೀನ್ ಪಟ್ನಾಯಿಕ್ ರಾಖಿ ಕಟ್ಟಿದ ಸಹೋದರಿಗೆ ಕೊಟ್ಟ ಮಾತು ಉಳಿಸಿದರು: ದ್ರೌಪದಿ ಮುರ್ಮು

ಒಡಿಶಾದ ವಿಧಾನಸಭಾ ಆವರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಂಸದರೊಂದಿಗೆ ಸಂವಾದ ಮಾಡಿದ ಮುರ್ಮು, ಸಹೋದರಿಯಂತೆ ನಾನು ಜಗನ್ನಾಥ್(ಪಟ್ನಾಯಿಕ್) ಅವರ ಕೈಗೆ ರಾಖಿ ಕಟ್ಟಿದ್ದೆ. ಸಹೋದರಿಯಾಗಿ ನಾನು ಏನಾದರೂ ಕೇಳುವ ಮುನ್ನವೇ ಸಹೋದರ ನನಗೆ ಬೆಂಬಲ ನೀಡಿದ್ದಾರೆ

ಬೆಂಬಲ ಘೋಷಿಸುವ ಮೂಲಕ ನವೀನ್ ಪಟ್ನಾಯಿಕ್ ರಾಖಿ ಕಟ್ಟಿದ ಸಹೋದರಿಗೆ ಕೊಟ್ಟ ಮಾತು ಉಳಿಸಿದರು: ದ್ರೌಪದಿ ಮುರ್ಮು
ನವೀನ್ ಪಟ್ನಾಯಿಕ್ ಜತೆ ದ್ರೌಪದಿ ಮುರ್ಮು
TV9 Web
| Edited By: |

Updated on:Jul 08, 2022 | 7:34 PM

Share

ಭುವನೇಶ್ವರ್: ತಮ್ಮ ತವರು ರಾಜ್ಯವಾದ ಒಡಿಶಾದಲ್ಲಿ (Odisha) ಸಿಕ್ಕಿದ ಅಭೂತಪೂರ್ವ ಸ್ವಾಗತಕ್ಕೆ ಭಾವುಕರಾದ ರಾಷ್ಟ್ರಪತಿ ಹುದ್ದೆಗಾಗಿ ಸ್ಪರ್ಧಿಸುತ್ತಿರುವ  ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu), ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ರಕ್ಷಾಬಂಧನ ವೇಳೆ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನವೀನ್ ಪಟ್ನಾಯಿಕ್ (Naveen Patnaik) ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ. ಮಯೂರ್ ಭಂಜ್ ಜಿಲ್ಲೆಯ ಬುಡಕಟ್ಟು ನಿವಾಸಿಯಾಗಿರುವ ಮುರ್ಮು ಅವರು ಪ್ರಚಾರಕ್ಕಾಗಿ ಒಡಿಶಾಗೆ ಭೇಟಿ ನೀಡಿದಾಗ ಅವರನ್ನು ರಾಜ್ಯದ ಅತಿಥಿಯಂತೆ ಸತ್ಕರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಒಡಿಶಾದ ವಿಧಾನಸಭಾ ಆವರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಂಸದರೊಂದಿಗೆ ಸಂವಾದ ಮಾಡಿದ ಮುರ್ಮು, ಸಹೋದರಿಯಂತೆ ನಾನು ಜಗನ್ನಾಥ್(ಪಟ್ನಾಯಿಕ್) ಅವರ ಕೈಗೆ ರಾಖಿ ಕಟ್ಟಿದ್ದೆ. ಸಹೋದರಿಯಾಗಿ ನಾನು ಏನಾದರೂ ಕೇಳುವ ಮುನ್ನವೇ ಸಹೋದರ ನನಗೆ ಬೆಂಬಲ ನೀಡಿದ್ದಾರೆ. ಒಡಿಶಾದ ಮಗಳಿಗೆ ಅವರು ನೀಡಿದ ಗೌರವಕ್ಕೆ ನಾನು ಋಣಿ ಎಂದು ಮುರ್ಮು ಹೇಳಿದ್ದಾರೆ.

ಒಡಿಶಾ ಮುಖ್ಯಮಂತ್ರಿ ಅವರು ತಮ್ಮ ನವೀನ್ ನಿವಾಸದಲ್ಲಿ ಮುರ್ಮ ಅವರಿಗೆ ಮಧ್ಯಾಹ್ನ ಆತಿಥ್ಯ ನೀಡಿದ್ದಾರೆ. ಮಧ್ಯಾಹ್ನದ ಊಟಕ್ಕೆ ಅನ್ನ, ಬೇಳೆ ಸಾರು ಜತೆ ಒಡಿಶಾದ ಖಾದ್ಯಗಳಾದ ಬೈಗನ್ ಭಾಜಾ, ಆಲೂ ಭರ್ತಾ , ಬಡೀ ಚುರಾ ಬಡಿಸಲಾಗಿದೆ ಎಂದು ಮುಖ್ಯಮಂತ್ರಿಯವರ ನಿವಾಸದ ಮೂಲಗಳು ಹೇಳಿವೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮತ್ತು ಬಿಜೆಡಿಯ ಸಂಸದೀಯ ಪಕ್ಷದ ನಾಯಕ ಪಿನಾಕಿ ಮಿಶ್ರಾ ಕೂಡಾ ನವೀನ್ ನಿವಾಸದಲ್ಲಿ ಮುರ್ಮು ಅವರಿಗೆ ನೀಡಿದ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಒಡಿಶಾದಲ್ಲಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಮುರ್ಮು(64) ಎಲ್ಲ ಶಾಸಕರು ನನ್ನ ಸಹೋದರ ಸಹೋದರಿಯಾಗಿದ್ದಾರೆ ಎಂದು ಹೇಳಿದ್ದಾರೆ. ನಾನು ಇಲ್ಲಿರುವ ಬಹುತೇಕರ ಜತೆ ಕೆಲಸ ಮಾಡಿದ್ದೇನೆ. ನಾನು ವಿಧಾನಸಭೆಯಿಂದ ಹೊರಹೋದ ನಂತರ ಬಂದವರು ಕೂಡಾ ನನ್ನ ಸಹೋದರ ಸಹೋದರಿಯರು. ನನಗೆ ಅವರನ್ನು ವೈಯಕ್ತಿಕವಾಗಿ ಗೊತ್ತಿಲ್ಲ ಆದರೆ ತಂತ್ರಜ್ಞಾನ ನಮ್ಮೆಲ್ಲರನ್ನೂ ಹತ್ತಿರಕ್ಕೆ ಕರೆತಂದಿದೆ. ನಾನು ಎಲ್ಲ ಸಹೋದರ ಸಹೋದರಿಯರ ಬೆಂಬಲ ಬೇಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾವು ಒಡಿಶಾವನ್ನು ಸುಂದರ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶವಾಗಿರಿಸಬೇಕು. ಮುಖ್ಯಮಂತ್ರಿ ಮತ್ತು ಎಲ್ಲ ಶಾಸಕರಲ್ಲಿ ಒಡಿಶಾದ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಮುರ್ಮು ಹೇಳಿದ್ದಾರೆ.

Published On - 7:18 pm, Fri, 8 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ