Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಮೈಸೂರಿನ ಆರು ಪ್ರವಾಸಿಗರು ಸೇಫ್

ಜಮ್ಮು ಕಾಶ್ಮೀರದ ಅಮರನಾಥ ಕ್ಷೇತ್ರ ಬಳಿ ಶುಕ್ರವಾರ ಸಂಜೆ ಮೇಘ ಸ್ಫೋಟಗೊಂಡಿದ್ದು, ಮೈಸೂರಿನ ಆರು ಪ್ರವಾಸಿಗರು ಸಿಲುಕಿದ್ದು, ಸದ್ಯ ಸೇಫ್​ ಆಗಿದ್ದಾರೆ.

ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಮೈಸೂರಿನ ಆರು ಪ್ರವಾಸಿಗರು ಸೇಫ್
ಮೈಸೂರು ಪ್ರವಾಸಿಗರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 09, 2022 | 9:15 AM

ಮೈಸೂರು: ಜಮ್ಮು ಕಾಶ್ಮೀರದ (Jammu and Kashmir) ಅಮರನಾಥ ಕ್ಷೇತ್ರ (Amarnath shrine) ಬಳಿ (ಜುಲೈ 08)  ಶುಕ್ರವಾರ ಸಂಜೆ ಮೇಘ ಸ್ಫೋಟದಿಂದಾಗಿ (cloudburst) ಹಠಾತ್ ಪ್ರವಾಹವುಂಟಾಗಿದ್ದು 15 ಮಂದಿ ಸಾವಿಗೀಡಾಗಿದ್ದು, 40 ಮಂದಿ ನಾಪತ್ತೆಯಾಗಿದ್ದರು. ಮೇಘಸ್ಫೋಟದಲ್ಲಿ ಮೈಸೂರು ಪ್ರವಾಸಿಗರು ಸಿಲುಕಿದ್ದು ಸದ್ಯ ಸೇಫ್​ ಆಗಿದ್ದಾರೆ. ಕಿರಣ್, ಪ್ರಸಾದ್, ವಿಠ್ಠಲ್ ರಾಜ್ ಸೇರಿದಂತೆ 6 ಜನ ಸುರಕ್ಷಿತವಾಗಿದ್ದಾರೆ.​ ಜೂ.2ರಂದು ಅಮರನಾಥ್ ಪ್ರವಾಸಕ್ಕೆ ಮೈಸೂರಿನ ಪ್ರವಾಸಿಗರು ತೆರಳಿದ್ದು, ಘಟನೆ ವೇಳೆ ಶೇಷನಾಗ್ ಬಳಿ ಇದ್ದರು. ಮೇಘ ಸ್ಫೋಟದಿಂದಾಗಿ ನದಿಯ ಪ್ರವಾಹದಿಂದಾಗಿ ಟೆಂಟ್​ಗಳು ಕೊಚ್ಚಿ ಹೋಗಿದ್ದು, ತಕ್ಷಣ ಆರಂಭವಾದ ರಕ್ಷಣಾ ಕಾರ್ಯಚರಣೆಯಿಂದಾಗಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಮೇಘ ಸ್ಫೋಟದ ದೃಶ್ಯಗಳು ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಮೈಸೂರಿಗೆ ವಾಪಸ್ಸಾಗಲು ಪ್ರವಾಸಿಗರು ಸಿದ್ದತೆ ನಡೆಸಿದ್ದು, ಸೇನಾ ಕ್ಯಾಂಪ್​ನಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Amarnath Shrine Cloudburst: ಅಮರನಾಥ ಯಾತ್ರೆ ವೇಳೆ ಮೇಘ ಸ್ಫೋಟ, ಆತಂಕದ ದೃಶ್ಯಗಳು ಇಲ್ಲಿವೆ ನೋಡಿ

ಬೀದರ್​ನ 10 ಜನರ‌ ತಂಡ ಸುರಕ್ಷಿತ:

ಅದೇ ರೀತಿಯಾಗಿ ಜುಲೈ 5 ರಂದು ಬೀದರ್​ನಿಂದ 10 ಜನರ‌ ತಂಡ ಅಮರನಾಥ ಯಾತ್ರೆಗೆ ತೆರಳಿದ್ದು ಸದ್ಯ ಸುರಕ್ಷಿತವಾಗಿದ್ದಾರೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ 6 ಜನ, ಭಾಲ್ಕಿ ತಾಲೂಕಿನ 2, ಬಸವಕಲ್ಯಾಣದ ಓರ್ವ ಚೆನೈ ಮೂಲದ ಓರ್ವ ಸೇರಿದಂತೆ 10 ಯುವಕರ ತಂಡ ಅಮರನಾಥ ಯಾತ್ರೆಗೆ ತೆರಳಿದ್ದರು. ಭಾರೀ ಮಳೆಯಿಂದಾಗಿ 5 ಜನರು ಮಾತ್ರ ದರ್ಶನ ಪಡೆದಿದ್ದು, ಇನ್ನೂಳಿದ ಐವರು ದರ್ಶನ ಸಾಧ್ಯವಾಗಿಲ್ಲ. ದರ್ಶನ ಪಡೆಯದೆ ಐದು ಭಕ್ತರು ಸೇರಿದಂತೆ 10 ಜನರು‌‌ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.

ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ

ಮೇಘ ಸ್ಫೋಟದಿಂದ ಹಲವು ಯಾತ್ರಿಕರು ಕೊಚ್ಚಿ ಹೋಗಿದ್ದಾರೆ. ಕರ್ನಾಟಕದ ಯಾತ್ರಿಕರ ಸಂಪರ್ಕಿಸಲು ರಾಜ್ಯ ಸರ್ಕಾರ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ. 080-1070, 22340676 ಸಂಖ್ಯೆಗೆ ಫೋನ್‌ ಮಾಡಬಹುದು. Email: revenuedmkar@gmail.comಗೆ ಸಂಪರ್ಕಿಸಬಹುದಾಗಿದೆ.

ಪ್ರವಾಸಿಗರ ರಕ್ಷಣೆಗಾಗಿ ಹೆಲ್ಪ್‌ಲೈನ್ ಆರಂಭ

ಕಾಶ್ಮೀರ ವಿಭಾಗದ ಹೆಲ್ಪ್‌ಲೈನ್ ಸಂಖ್ಯೆ-0194-2496240 ಅಮರನಾಥ ದೇಗುಲದ ಹೆಲ್ಪ್‌ಲೈನ್ ಸಂಖ್ಯೆ-0194-2313149 ಎನ್‌ಡಿಆರ್‌ಎಫ್‌-011-23438252, 011-23438253

ಅಮರನಾಥ ಯಾತ್ರೆ ಇದೀಗ ರದ್ದು:

ಮೇಘ ಸ್ಫೋಟವುಂಟಾಗಿದ್ದು ಕಮ್ಯುನಿಟಿ ಕಿಚನ್ ಮತ್ತು ಟೆಂಟ್​ಗಳಿಗೆ ಹಾನಿಯಾಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಏರ್​​ಲಿಫ್ಟ್ ಮಾಡಲಾಗಿದೆ. ಕೆಟ್ಟ ಹವಾಮಾನದಿಂದಾಗಿ  ಅಮರನಾಥ ಯಾತ್ರೆಯನ್ನು ಇದೀಗ ರದ್ದು ಮಾಡಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊವಿಡ್​​ನಿಂದಾಗಿ ಎರಡು ವರ್ಷದ ಅಂತರದ ನಂತರ ಈ ವರ್ಷ ಜೂನ್ 30ರಂದು ಅಮರನಾಥ ತೀರ್ಥ ಯಾತ್ರೆ ಆರಂಭವಾಗಿತ್ತು. ಅಲ್ಲಿಂದ 72,000ಕ್ಕಿಂತಲೂ ಹೆಚ್ಚು ಯಾತ್ರಾರ್ಥಿಗಳು ದೇವರ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ರಕ್ಷಾ ಬಂಧನದ ದಿನ ಅಂದರೆ ಆಗಸ್ಟ್ 11ರಂದು ತೀರ್ಥಯಾತ್ರೆ ಮುಕ್ತಾಯವಾಗಬೇಕಿತ್ತು. ಜಮ್ಮು ಕಾಶ್ಮೀರದ ಆಡಳಿತದೊಂದಿಗೆ ತಾನು ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸಚಿವ ಡಾ ಜಿತೆಂದ್ರ ಸಿಂಗ್ ಹೇಳಿದ್ದಾರೆ. ಎಸ್​​ಡಿಆರ್​​ಎಫ್ ಮತ್ತು ಎನ್​​ಡಿಆರ್​​ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು ಅಗತ್ಯ ಸಹಾಯಗಳನ್ನು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Rain: ಮಳೆಯ ಆರ್ಭಟಕ್ಕೆ ಕರ್ನಾಟಕ ತತ್ತರ; ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಣೆ

ಮೇಘಸ್ಫೋಟದ ಕುರಿತು ಪತ್ರಿಕಾ ಟಿಪ್ಪಣಿ:

ಇಂದು ಸಾಯಂಕಾಲ 5.30 ರ ಸುಮಾರಿಗೆ ಶ್ರೀ ಅಮರನಾಥ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದ್ದು ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ಅಮರನಾಥ ಯಾತ್ರಾರ್ಥಿಗಳ ವಾಸಸ್ಥಳಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರಿಂದ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮೇಘ ಸ್ಫೋಟ ಸಂತ್ರಸ್ತರಿಗಾಗಿ ಸಹಾಯ ಒದಗಿಸಲು ಜಮ್ಮು ಕಾಶ್ಮೀರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದಿಂದ ಯಾವುದೇ ವ್ಯಕ್ತಿ ಸಿಲುಕಿದ್ದರೆ ರಾಜ್ಯ ತುರ್ತು ನಿಯಂತ್ರಣ ಕೊಠಡಿಯನ್ನು ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು: 080 1070, 22340676, ಇಮೇಲ್: incomedmkar@gmail.com ಜಮ್ಮು ಕಾಶ್ಮೀರ ಸರ್ಕಾರದ ಮೂಲಕ ಸಹಾಯ ಹಸ್ತ ಚಾಚಲಾಗಿದೆ. NDRF: 011-23438252, 011-23438253 Kashmir Divisional Helpline: 0194-2496240 Shrine Board Helpline: 0194-2313149

Published On - 7:15 am, Sat, 9 July 22

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್