ವಿಜಯ ಸಂಕೇಶ್ವರ ಅವರ ಯಶಸ್ಸಿನ ಹಾದಿ ನೆನೆದ ಸಿಎಂ ಬಸವರಾಜ ಬೊಮ್ಮಾಯಿ

| Updated By: ರಾಜೇಶ್ ದುಗ್ಗುಮನೆ

Updated on: Nov 19, 2022 | 11:04 PM

ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ. ವಿಜಯ ಸಂಕೇಶ್ವರ ಅವರ ಯಶಸ್ಸಿನ ಹಾದಿಯನ್ನು ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.

‘ವಿಜಯಾನಂದ’ (Vijayananda) ಸಿನಿಮಾದ ಟ್ರೇಲರ್ ಇಂದು (ನವೆಂಬರ್ 19) ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿ ತಂಡಕ್ಕೆ ಶುಭ ಕೋರಿದ್ದಾರೆ. ವಿಜಯ ಸಂಕೇಶ್ವರ ಅವರ ಯಶಸ್ಸಿನ ಹಾದಿಯನ್ನು ಬಸವರಾಜ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ. ‘ಸಂಕೇಶ್ವರ್ ಅವರನ್ನು ಮೊದಲು ನೋಡಿದ್ದು 1985ರಲ್ಲಿ. ಅವರು ಆಗಷ್ಟೇ ಸಾರಿಗೆ ಉದ್ಯಮ ಶುರು ಮಾಡಿದ್ದರು. ವಿಜಯ ಸಂಕೇಶ್ವರ ಅವರಿಗೆ ಯಶಸ್ಸಿನ ಹಸಿವಿತ್ತು. ಅಸಾಧ್ಯವಾದುದ್ದನ್ನು ಸಾಧ್ಯವಾಗಿಸೋದೇ ವಿಜಯಸಂಕೇಶ್ವರ ಅವರ ಗುಣ’ ಎಂದು ಹೊಗಳಿದ್ದಾರೆ ಬೊಮ್ಮಾಯಿ.

Published on: Nov 19, 2022 10:30 PM