ಗ್ರಾಮ ವಾಸ್ತವ್ಯ ವೇಳೆ ಕೆಂಚನಹಳ್ಳಿ ಗ್ರಾಮಸ್ಥರೊಂದಿಗೆ ಹೆಜ್ಜೆ ಹಾಕಿದ ಸಚಿವ ಆರ್. ಅಶೋಕ

ಗ್ರಾಮ ವಾಸ್ತವ್ಯ ವೇಳೆ ಕೆಂಚನಹಳ್ಳಿ ಗ್ರಾಮಸ್ಥರೊಂದಿಗೆ ಹೆಜ್ಜೆ ಹಾಕಿದ ಸಚಿವ ಆರ್. ಅಶೋಕ

TV9 Web
| Updated By: ವಿವೇಕ ಬಿರಾದಾರ

Updated on: Nov 19, 2022 | 10:38 PM

ಕಂದಾಯ ಸಚಿವ ಆರ್​ ಅಶೋಕ ಇಂದು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಕೆಂಚನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ ಭೇಟಿ ನೀಡಿದರು.

ಕಂದಾಯ ಸಚಿವ ಆರ್​ ಅಶೋಕ ಇಂದು (ನ.19) ಗ್ರಾಮ ವಾಸ್ತವ್ಯ ಹೂಡಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಕೆಂಚನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ ಭೇಟಿ ನೀಡಿದರು. ಬೆಳಗ್ಗೆಯಿಂದಲೂ ಎಂ.ಬೇಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಜನರ ಅಹವಾಲು ಸ್ವೀಕರಿಸಿದ್ದಾರೆ. ಸಾಯಂಕಲ ಗ್ರಾಮಸ್ಥರೊಂದಿಗೆ ಹಾಡಿ ಜನರ ಜೊತೆ ನೃತ್ಯ ಮಾಡಿದ್ದಾರೆ. ಸಚಿವ ಆರ್.ಅಶೋಕ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಸಾಂಪ್ರದಾಯಿಕ ವಾದ್ಯಕ್ಕೆ ನೃತ್ಯ ಮಾಡಿದರು. ನಂತರ ಸಚಿವರು ಹಾಗೂ ಅಧಿಕಾರಿಗಳು ಬೆಂಕಿ ಮುಂದೆ ಕುಳಿತು ಚಳಿ ಕಾಯಿಸಿಕೊಂಡರು.